ಜಿಲ್ಲೆ

ನಿರಂತರ ಪರಿಶ್ರಮದಿಂದ ಅಭಿವೃದ್ಧಿ ಸಾಧ್ಯ

ಜಿ.ಹೆಚ್. ಧನ್ಯಕುಮಾರ್

ಶೃಂಗೇರಿ: ವಿಶ್ವದಲ್ಲಿ ದೊಡ್ಡ ಕ್ರಿಯಾಶೀಲ ಯುವ ನಾಗರಿಕ ಸಮೂಹ ನಿರ್ಮಾಣವಾಗಲು ಸಮಾಜದಲ್ಲಿ ಗುಣಾತ್ಮಕ ಬದಲಾವಣಿಯಾಗಬೇಕಿದೆ ಎಂದು ಜೆಸಿಐ ಸಂಸ್ಥೆ ರಾಷ್ಟ್ರೀಯ ಅಧ್ಯಕ್ಷ ಅಂಕುರ್ ಜುಂಜುನ್ವಾಲಾ ಹೇಳಿದರು.

ಜೆಸಿಐ ವಲಯ-14ರ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನುಷ್ಯನಲ್ಲಿ ಉತ್ಸಾಹವೇ ಜೀವನ. ನಿರುತ್ಸಾಹವೇ ಅವಸಾನವಾಗಿರುತ್ತದೆ. ಮಲೆನಾಡಿನ ಪರಿಸರ ವಿಶ್ವ ಮಾನವತ್ವ ಮೈಗೂಡಿಸಲು ಯೋಗ್ಯವಾದ ತಾಣ. ಅಭಿವೃದ್ಧಿಗೆ ನಿರಂತರ ಪರಿಶ್ರಮವೇ ಮೂಲಾಧಾರ. ಜೆಸಿಐ ಸಂಸ್ಥೆ ಉತ್ತಮ ನಾಯಕತ್ವ ನಿರ್ಮಾಣ ಮಾಡಿ ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿದೆ. ಸಮುದಾಯ ಅಭಿವೃದ್ಧಿಗೊಳಿಸುವ ಕಾಯಕಕ್ಕೆ ಯುವ ಜನತೆ ಮುಂದಾಗಬೇಕು. ಲಭ್ಯವಿರುವ ಅವಕಾಶ ಬಳಸಿ ಮನುಕುಲದ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳಬೇಕು ಎಂದರು.

ವಲಯ 14ರ 250ಕ್ಕೂ ಹೆಚ್ಚು ಜೆಸಿಐ ಸದಸ್ಯರು, ಘಟಕ ಅಧ್ಯಕ್ಷರು ಭಾಗವಹಿಸಿದ್ದರು. ಈ ವರ್ಷ ಅತ್ಯುತ್ತಮವಾಗಿ ಜೆಸಿಐನಲ್ಲಿ ಸಮಾಜಮುಖಿ ಕಾರ್ಯಕ್ರಮ ನಿರ್ವಹಿಸಿದ ಮಾಡಿದ 10 ಘಟಕಗಳಿಗೆ ವಿಶೇಷ ಬಹುಮಾನ ನೀಡಲಾಯಿತು. ಜೆಸಿಐ ಶೃಂಗೇರಿ ಘಟಕದ ಅಧ್ಯಕ್ಷ ವಿ.ಎಸ್.ಅಶೋಕ್, ವಲಯ 14ರ ವಿಶೇಷ ಅಧಿಕಾರಿ ಶ್ರೀನಿವಾಸ್, ಉಪಾಧ್ಯಕ್ಷ ಅಕ್ಷಯ್ ಕುಮಾರ್, ಯೋಗಿಶ್, ಆಶಾಜೈನ್, ಸುಪ್ರೀತ್, ಸಮ್ಮೇಳನ ನಿರ್ದೇಶಕ ಶ್ರೀಕಾಂತ್, ಅನ್ವಿತ್ ಕಾಮತ್ ಉಪಸ್ಥಿತರಿದ್ದರು.