ಸಿರವಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ತಾಲೂಕಿನ ಅಧ್ಯಕ್ಷ ಜೆ.ದೇವರಾಜಗೌಡ ಪಾಟೀಲ್ ಮಾತನಾಡಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ಎಚ್ ಕೆ ಅಮರೇಶ, ಮಾಜಿ ಶಾಸಕ ಗಂಗಾಧರ ನಾಯಕ, ಪಪಂ ಉಪಾಧ್ಯಕ್ಷೆ ಲಕ್ಷ್ಮೀ ಆದೆಪ್ಪ, ಪ್ರಮುಖರಾದ ಕೃಷ್ಣ ನಾಯಕ, ಸಂದೀಪ್ ಪಾಟೀಲ್, ಅಜಿತ ಕುಮಾರ ಹೊನ್ನಟಗಿ, ಅಮರೇಶ ಗಡ್ಲ್, ಮಲ್ಲಿಕಾರ್ಜುನ ಜಕ್ಕಲದಿನ್ನಿ ಇತರರಿದ್ದರು. 
ಜಿಲ್ಲೆ

ಉಚಿತ ಭಾಗ್ಯಗಳಿಂದ ಅಭಿವೃದ್ಧಿ ಮರಿಚೀಕೆ

ಗಾಯತ್ರಿ ಮಾಲಿಪಾಟೀಲ್

ಸಿರವಾರ: ಪಟ್ಟಣದಲ್ಲಿ ರಾಜ್ಯ ಸರ್ಕಾರ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ಶಿರಸ್ತೇದಾರ್ ವಾಸವಿ ಅವರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಜೆ.ದೇವರಾಜಗೌಡ ಪಾಟೀಲ್ ಮಾತನಾಡಿ, ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಬೆಲೆ ಏರಿಕೆಯ ಭಾಗ್ಯ ನೀಡಿದೆ. ಉಚಿತ ಭಾಗ್ಯಗಳಿಂದ ಅಭಿವೃದ್ಧಿ ಮರೀಚಿಕೆಯಾಗಿದೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲ. ಇದರ ನಡುವೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರಿಗೆ ಹೊರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ಗಂಗಾಧರ ನಾಯಕ, ಪಪಂ ಉಪಾಧ್ಯಕ್ಷೆ ಲಕ್ಷ್ಮೀ ಆದೆಪ್ಪ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಎಚ್.ಕೆ.ಅಮರೇಶ, ಪ್ರಮುಖರಾದ ಕೃಷ್ಣ ನಾಯಕ, ಸಂದೀಪ್ ಪಾಟೀಲ್, ಅಜಿತ ಕುಮಾರ ಹೊನ್ನಟಗಿ, ಅಮರೇಶ ಗಡ್ಲ್, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಅರುಣಕುಮಾರ ಮಲ್ಲಟ, ರಾಘವೇಂದ್ರ ಶೆಟ್ಟಿ ಕವಿತಾಳ, ಹನುಮರೆಡ್ಡಿ ಗಣದಿನ್ನಿ, ಎನ್.ಆರ್.ಪಾಟೀಲ್, ಚನ್ನೂರು ಚನ್ನಪ್ಪ, ಬಸ್ಸಪ್ಪಗೌಡ ನಂದರಡ್ಡಿ, ಎನ್.ಪಂಪಣ್ಣ ಸಾಹುಕಾರ, ಸುರೇಶಗೌಡ ನವಲಕಲ್, ಎಂ.ರಮೇಶ ಶೆಟ್ಟಿ, ಭರತ್ ನಾಯಕ, ಮೌಲಸಾಬ ಗಣದಿನ್ನಿ, ಕೆ.ರಾಘು, ಚಂದ್ರಶೇಖರ ಚಾಗಭಾವಿ ಇತರರಿದ್ದರು.