ಜಿಲ್ಲೆ

ಲೋಕೋಪಯೋಗಿ ಇಲಾಖೆಯಿಂದ ಅಭಿವೃದ್ಧಿಗೆ ಅನುದಾನ

ಸೋಮಲಿಂಗ ತಳವಾರ

ಚನ್ನಮ್ಮನ ಕಿತ್ತೂರು: ಮಾದರಿ ಕ್ಷೇತ್ರವನ್ನಾಗಿಸಲು ಶಾಸಕರ ಆಸಕ್ತಿ ಬಹಳ ಮುಖ್ಯ. ಶಾಸಕರ ಆಸಕ್ತಿಯಿಂದಲೇ ಕಿತ್ತೂರು ಕ್ಷೇತ್ರದಲ್ಲಿ ಅಭಿವದಿಟಛಿ ಪರ್ವ ಆರಂಭವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಪಟ್ಟಣದ ಕೋಟೆಯ ಮುಂಭಾಗದ ಅರಳಿಕಟ್ಟೆ ವೃತ್ತದಲ್ಲಿ ಸೋಮವಾರ ಲೋಕೋಪಯೋಗಿ ಇಲಾಖೆಯ 25 ಕೋಟಿ ರೂ. ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯ ಎಲ್ಲ ಶಾಸಕರಿಗೆ ನಮ್ಮ ಇಲಾಖೆಯಿಂದ ಸಾಕಷ್ಟು ಅನುದಾನ ನೀಡಲಾಗುತ್ತಿದ್ದು, ಇದರಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದೆ ಎಂದರು.

ಮೊದಲ ಬಾರಿ ಯಾರೇ ಶಾಸಕರಾದರೂ ಅದು ಉಡುಗೊರೆಯಾಗಿರುತ್ತದೆ. ಎರಡನೇ ಬಾರಿ ಶಾಸಕರಾದರೆ ಅದರಲ್ಲಿ ಅವ-ರ ಪರಿಶ್ರಮ ಅಡಗಿರುತ್ತದೆ. ಇಲ್ಲಿನ ಜನರು ಶಾಸಕರಾಗಿ ಬಾಬಾಸಾಹೇಬ ಪಾಟೀಲರೇ ಇರಬೇಕು ಎಂದು ಹೇಳುತ್ತಿದ್ದಾರೆ. ಶಾಸಕ ಬಾಬಾಸಾಹೇಬ ಪಾಟೀಲರನ್ನು ಎರಡನೇ ಬಾರಿ ಶಾಸಕರನ್ನಾಗಿಸಲು ಕ್ಷೇತ್ರ ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲವಾಗಿ ನಿಂತಿದ್ದೇವೆ ಎಂದರು. ಕಿತ್ತೂರಿಂದ ಗಂದಿಗವಾಡ ಗ್ರಾಮಕ್ಕೆ ತೆರಳುವ ರಸ್ತೆ ಸುಧಾರಿಸಲು ಸೂಕ್ತ ಕ್ರಮ ಕೆಗೊಳ್ಳಲಾಗುವುದು. ಈ ರಸ್ತೆ ಸುಧಾರಣೆಯಾದಲ್ಲಿ 3ಕಿ.ಮೀ. ವರೆಗೆ ಪ್ರಯಾಣ ಕಡಿಮೆಯಾಗಲಿದೆ ಎಂದು ತಿಳಿಸಿದರು.

ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಕಿತ್ತೂರು ಪಟ್ಟಣದ ಅಭಿವದಿಟಛಿಯ ಜತೆಗೆ ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಈಗಾಗಲೇ ಅಭಿವೃದ್ಧಿ ಕಾರ್ಯಗಳು ಆರಂಭವಾಗಿವೆ. ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರ ಸಂಪೂರ್ಣ ಬೆಂಬಲದೊಂದಿಗೆ ಅನುದಾನವೂ ದೊರೆತಿದೆ ಎಂದರು.

5 ಕೋಟಿ ರೂ. ವೆಚ್ಚದಲ್ಲಿ ಗೊಂಬಿಗುಡಿಯಿಂದ ಬಸಾಪುರ ಕ್ರಾಸ್​ವರೆಗೆ, 85 ಲಕ್ಷ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಅರಳಿಕಟ್ಟಿವರೆಗೆ ವಿದ್ಯುತ್​ ಅಲಂಕಾರ ಕಾಮಗಾರಿ, 3 ಕೋಟಿ ರೂ. ವೆಚ್ಚದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಸಭಾಭವನಕ್ಕೆ ರಸ್ತೆ, ಚರಂಡಿ ಹಾಗೂ ಪೀಠೋಪಕರಣ ಅಳವಡಿಕೆ, 5 ಕೋಟಿ ರೂ. ವೆಚ್ಚದಲ್ಲಿ ಸೆನಿಕ ಶಾಲೆಯ ಕ್ರಾಸ್​ನಿಂದ ಹೆದ್ದಾರಿವರೆಗೆ ಚತುಷ್ಪಥ ರಸ್ತೆ, 10.30 ಕೋಟಿ ರೂ. ವೆಚ್ಚದಲ್ಲಿ ಅವರಾದಿಯಿಂದ ಖೋದಾನಪುರ ರಸ್ತೆ ಅಗಲೀಕರಣ ಹಾಗೂ ರಸ್ತೆ ನಿರ್ಮಾಣ ಕಾಮಗಾರಿ ನಡೆಯಲಿವೆ ಎಂದು ಮಾಹಿತಿ ನೀಡಿದರು.

ಪಟ್ಟಣ ಪಂಚಾಯಿತಿಯ ಜೆಸಿಬಿ, ಟ್ರ್ಯಾಕ್ಟರ್​ ಸೇರಿ ವಿವಿಧ ಯಂತ್ರೋಪಕರಣಗಳ ಬಳಕೆಗೆ ಚಾಲನೆ ನೀಡಲಾಯಿತು. ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿಯ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾರಿ ಸ್ವಾಮೀಜಿ, ಪಪಂ ಅಧ್ಯ ಜೆಸಿದ್ದರಾಮ ಮಾರಿಹಾಳ, ಕಿತ್ತೂರು ಬ್ಲಾಕ್​ ಅಧ್ಯ ಸಂಗನಗೌಡ ಪಾಟೀಲ, ಮುಖಂಡರಾದ ಶಂಕರ ಹೊಳಿ ಸೇರಿ ಪಪಂ ಸದಸ್ಯರು ಹಾಜರಿದ್ದರು.