ಜಿಲ್ಲೆ

ವ್ಯಾಪಾರ-ವಹಿವಾಟಿನಿಂದ ಅಭಿವೃದ್ಧಿ

ಪ್ರಶಾಂತ ಹೂಗಾರ

ಹುಕ್ಕೇರಿ: ವ್ಯಾಪಾರ, ವಹಿವಾಟು ಹೆಚ್ಚಾದರೆ ಯಾವುದೇ ಗ್ರಾಮ, ಪಟ್ಟಣ ಅಭಿವೃದ್ಧಿ ಹೊಂದುತ್ತದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

ಪಟ್ಟಣದ ಕೋರ್ಟ್ ವೃತ್ತದ ಬಳಿ ರಾಯಲ್ ಫರ್ನಿಚರ್ ಹಾಗೂ ಕ್ರೀಡಾ ಸಾಮಗ್ರಿ ಮಾರಾಟ ಮಳಿಗೆಯನ್ನು ಈಚೆಗೆ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಉಪಾಹಾರ ಕೇಂದ್ರ ಮತ್ತು ಮದ್ಯಪಾನ ಮಾರಾಟ ಕೇಂದ್ರಗಳು ಹೆಚ್ಚಾಗುತ್ತಿರುವುದರಿಂದ ಕೌಟುಂಬಿಕ ಸಮಸ್ಯೆ ಉಲ್ಬಣಿಸುತ್ತಿವೆ.  ಕ್ರೀಡಾ ಸಾಮಗ್ರಿ ಮಾರಾಟ ಹಾಗೂ ಡೇರಿ ಕೇಂದ್ರಗಳು ಹೆಚ್ಚು ಸ್ಥಾಪನೆಯಾದರೆ ದೇಶಕ್ಕೆ ಸದೃಢ ಯುವ
ಸಂಪತ್ತು ಸಿಗುತ್ತದೆ ಎಂದರು.

ಹುಕ್ಕೇರಿ ಪಟ್ಟಣದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರನ್ನು ಸತ್ಕರಿಸಲಾಯಿತು. ಎ.ಕೆ. ಪಾಟೀಲ, ಸುರೇಶ ದೊಡ್ಡಲಿಂಗನವರ, ಪಿಂಟು ಶೆಟ್ಟಿ, ಬಿ.ಎಸ್.ಪಾಟೀಲ, ಸುನಿಲ ಬೈರಣ್ಣವರ ಇದ್ದರು.

ರಮೇಶ ಕತ್ತಿ ಅವರನ್ನು ಸತ್ಕರಿಸಲಾಯಿತು. ಹುಕ್ಕೇರಿ ಪಿಕೆಪಿಎಸ್ ಅಧ್ಯಕ್ಷ ಎ.ಕೆ. ಪಾಟೀಲ, ಹಿರಾ ಶುಗರ್ಸ್‌ ನಿರ್ದೇಶಕ ಸುರೇಶ ದೊಡ್ಡಲಿಂಗನವರ, ಎಸ್.ಕೆ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಪಿಂಟು ಶೆಟ್ಟಿ, ಬಿ.ಎಸ್.ಪಾಟೀಲ, ಮುಖಂಡರಾದ ಇಪ್ತೀಕಾರ್ ಪೀರಜಾದೆ, ಸುನೀಲ ಬೈರಣ್ಣವರ, ಶಫೀವುಲ್ಲಾ ಪೀರಜಾದೆ, ಇರ್ಫಾನ್ ಮೋಮಿನದಾದಾ, ಲಾಜಮ್ ನಾಯಿಕವಾಡಿ, ಜಾವೇದ್ ಸೈಯದ್, ರಫೀಕ್ ಖಾಜಿ, ನದೀಂ ಇನಾಮದಾರ್, ಪುಟ್ಟು ಖಾಡೆ ಇತರರಿದ್ದರು.