ಜಿಲ್ಲೆ

ಧಾರ್ಮಿಕ ಕಾರ್ಯಗಳಿಂದ ಅಭಿವೃದ್ಧಿ

ತುಮಕೂರು ಡೆಸ್ಕ್

ಬರಗೂರು: ಗ್ರಾಮಗಳಲ್ಲಿ ಹೆಚ್ಚು ಧಾರ್ಮಿಕ ಕಾರ್ಯಕ್ರಮಗಳು ನಡೆದಾಗ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಶಿರಾ ಬ್ಲಾಕ್​ ಕಾಂಗ್ರೆಸ್​ ಗ್ರಾಮಾಂತರ ಅಧ್ಯಕ್ಷ ನಟರಾಜ್​ ಬರಗೂರು ಹೇಳಿದರು.

ಶಿರಾ ತಾಲೂಕು ಬರಗೂರು ಗ್ರಾಮದಲ್ಲಿ ಭಾನುವಾರ ಏಕದಂತ ಗೆಳೆಯರ ಬಳಗ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿರಾ ತಾಲೂಕು ಯುವ ಜೆಡಿಎಸ್​ ಅಧ್ಯಕ್ಷ ಮಾತನಾಡಿ, ಎಂಟನೇ ವರ್ಷದ ಗಣೇಶ ಉತ್ಸವ ಮೆರಗು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಸಹ ಯಶಸ್ವಿಯಾಗಿ ನಡೆದು ಸಂಘದ ಶ್ರೇಯೋಭಿವೃದ್ಧಿಗೆ ಸಾರ್ಥಕತೆ ಕಾಣಲಿ ಎಂದರು.

ಸಹಾಯಕ ಸಬ್​ ಇನ್​ಸ್ಪೆಕ್ಟರ್​ ತಿಪ್ಪಣ್ಣ, ಫಕ್ರುದ್ದೀನ್​, ಮುದ್ದುಕೃಷ್ಣಗೌಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸಿದ್ದೇಶ್​, ಏಕದಂತ ಗೆಳೆಯರ ಬಳಗದ ರಘುವೀರ್​, ಅಫ್ರೋಜ್​, ತಿಪ್ಪೇಸ್ವಾಮಿ, ಗುರುಪ್ರಸಾದ್​, ಗಿರೀಶ್​, ಮನು, ವಿಜಯ್​ ಕುಮಾರ್​, ಬಸವರಾಜು, ಬೋಜ, ಅಂಜನ್​, ಮಲ್ಲೇಶ್​, ಹನುಮಂತರಾಯಪ್ಪ, ಕೃಷ್ಣಕುಮಾರ್​, ಗೋವಿಂದರಾಜ್​, ರಂಜಿತ್​ ಮತ್ತು ಗ್ರಾಮಸ್ಥರು ಇದ್ದರು.