ಉಳ್ಳಾಲ: ಲಾಕ್‌ಡೌನ್ ಸಂದರ್ಭ ಕೆಲವರು ಹೊಸ ಯೋಜನೆಗಳ ಮೂಲಕ ಯಶಸ್ಸು ಸಾಧಿಸಿದವರಿದ್ದಾರೆ. ಇಂಥವರ ಸಾಲಿನಲ್ಲಿ ಬೋಳಿಯಾರ್ ಗ್ರಾಮದ ಧರ್ಮತೋಟ ನಿವಾಸಿ, ಮಂಗಳೂರು ಅಲೋಶಿಯಸ್ ಕಾಲೇಜಿನ ಗ್ರಂಥಾಲಯ ಸಿಬ್ಬಂದಿ ವಿನ್ಸೆಂಟ್ ಡಿಸೋಜ -ದಿವ್ಯಜ್ಯೋತಿ ದಂಪತಿ ಪರಿಶ್ರಮ ಉಲ್ಲೇಖನೀಯ.
ದಂಪತಿ ಸಣ್ಣ ಮಟ್ಟಿನ ಕೃಷಿ ಮಾಡುತ್ತಿದ್ದು, ಸ್ವಸಹಾಯ ಸಂಘದಲ್ಲಿ ದುಡಿದ ಅನುಭವ, ಪಡೆದ ತರಬೇತಿಯ ಪ್ರಯೋಜನದಿಂದ ಕಾಲೇಜು ಬಂದ್ ಇರುವ ವೇಳೆ ಮನೆಯಲ್ಲೇ ಸ್ನೇಹಿತನ ಮನೆಯಿಂದ ಎರಡು ಕೋಳಿಮರಿ ತಂದು ಸಾಕಿದರು. ಕ್ರಮೇಣ ಕೋಳಿಗಳ ಸಂಖ್ಯೆ ಹೆಚ್ಚಿತು. ಮುಂದೆ ಗೂಡು ನಿರ್ಮಿಸಿ ಕೋಳಿ ಸಾಕಿದರು. ನಾಟಿಕೋಳಿಗಳಾಗಿದ್ದರಿಂದ ಕೋಳಿ ಅಂಕ ಪ್ರಿಯರು ಹುಂಜಗಳ ಖರೀದಿಗೆ ಮುಂದೆ ಬಂದರು. ಇದೇ ವೇಳೆ ಮಾರುಕಟ್ಟೆಯಲ್ಲಿ ತಲಾ 15 ರೂ. ತೂಗುವ ಮೊಟ್ಟೆಗಳು ಇವರಲ್ಲಿ 12 ರೂ.ಗಳಂತೆ ಮಾರಾಟವಾದವು. ಎರಡೂ ಕಡೆಯಿಂದ ಆದಾಯ ಬರತೊಡಗಿತು. ಪ್ರಸ್ತುತ ಈ ದಂಪತಿ ಕೋಲಿ ಸಾಕಣೆಯಲ್ಲೇ ಹೊಸ ಆದಾಯ ಕಂಡುಕೊಂಡಿದ್ದಾರೆ. ಟೆರೇಸ್‌ನಲ್ಲೇ ತರಕಾರಿ ಬೆಳೆದು ಮಾದರಿಯಾಗಿದ್ದಾರೆ.
ಕೋಳಿ ಸಾಕಲು ದೊಡ್ಡ ಬಂಡವಾಳ ಅಗತ್ಯವಿಲ್ಲ. ಮಾರಾಟಕ್ಕಾದರೆ ಆದಾಯ ಬರುತ್ತದೆ. ಮನೆಗಾದರೆ ಮೊಟ್ಟೆ, ಮಾಂಸ ಬಳಸಬಹುದು. ಬೆಳವಣಿಗೆಗೆ ಅನುಗುಣವಾಗಿ ಪಶು ವೈದ್ಯರ ಸಲಹೆ ಪಡೆದರೆ ದೊಡ್ಡ ಉದ್ಯಮವಾಗಿ ಬೆಳೆಸಬಹುದು. ಅದೇ ಕೆಲಸವನ್ನು ವಿನ್ಸೆಂಟ್ ದಂಪತಿ ಮಾಡಿರುವುದರಿಂದ ಯಶಸ್ವಿಯಾಗಿದ್ದಾರೆ. ಡಾ.ರೇಖಾ ಪಶು ವೈದ್ಯಾಧಿಕಾರಿ, ಪಾವೂರು ಪಶು ಆಸ್ಪತ್ರೆ ಲಾಕ್‌ಡೌನ್ ಸಂದರ್ಭ ಕೆಲಸ ಇಲ್ಲ ಎಂದು ಮನೆಯಲ್ಲೇ ಇದ್ದಾಗ ಕೋಳಿ ಸಾಕುವ ಮನಸ್ಸಾಯಿತು. ಕೋಳಿಗಳ ಸಂಖ್ಯೆ ಹೆಚ್ಚುತ್ತ ಹೋದಾಗ ಅಂಕದ ಕೋಳಿ ಜತೆ ಮೊಟ್ಟೆ ಮಾರಾಟ ಮಾಡಿ ಆದಾಯ ಬಂತು. ಇದಕ್ಕಾಗಿ ಪತ್ನಿ ಸಮಯ ಮೀಸಲಿಟ್ಟು ಆರೈಕೆ ಮಾಡುತ್ತಿದ್ದಾರೆ. ವಿನ್ಸೆಂಟ್ ಡಿಸೋಜ, ಕೋಳಿ ಸಾಕಣೆದಾರ