ಕುಂದೂರು ಗ್ರಾಮದಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. ದಯಾವತಿ, ಶಾಲಿನಿ, ಅಬ್ದುಲ್ ನಹಿಮ್, ಅಭಿಜಿತ್, ಪುಷ್ಪಾ, ನಮನಾ, ಕಾವ್ಯಾ ಇತರರಿದ್ದರು. 
ಜಿಲ್ಲೆ

ಸೌಲಭ್ಯ ಬಳಸಿಕೊಂಡು ಅಭಿವೃದ್ಧಿ ಹೊಂದಿ

ಎಸ್.ಎನ್.ರವೀಂದ್ರ

ಮೂಡಿಗೆರೆ: ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಹಲವು ರೀತಿಯ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಮಹಿಳಾ ಫಲಾನುಭವಿಗಳು ಸರ್ಕಾರದ ಸವಲತ್ತುಗಳನ್ನು ಬಳಸಿಕೊಳ್ಳುವ ಮೂಲಕ ಸದೃಢರಾಗಬೇಕೆಂದು ತಾಪಂ ಇಒ ದಯಾವತಿ ತಿಳಿಸಿದರು.

ಕುಂದೂರು ಗ್ರಾಮದಲ್ಲಿ ಮಂಗಳವಾರ ನಡೆದ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿ, ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬಂದಾಗ ಮಾತ್ರ ಕುಟುಂಬ ಸಮಗ್ರವಾಗಿ ಅಭಿವೃದ್ಧಿಗೊಳ್ಳಲು ಸಾಧ್ಯ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾದಲ್ಲಿ ದೌರ್ಜನ್ಯ ಕೂಡ ಕಡಿಮೆಯಾಗುವ ಜತೆಗೆ ಕುಟುಂಬ ಹಾಗೂ ಸಮಾಜದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.
ಒಕ್ಕೂಟದ ಅಧ್ಯಕ್ಷೆ ಶಾಲಿನಿ ಮಾತನಾಡಿ, ಸ್ವಸಹಾಯ ಗುಂಪುಗಳು ಮಹಿಳೆಯರ ಸ್ವಾವಲಂಬನೆಗೆ ದಾರಿ ದೀಪವಾಗಿವೆ. ಮಹಿಳೆಯರ ಆರ್ಥಿಕ ಉಳಿತಾಯ ಕುಟುಂಬದ ಅಭಿವೃದ್ಧಿಗೆ ವರದನವಾಗಿದೆ. ಸಂಜೀವಿನಿ ಮಹಿಳಾ ಒಕ್ಕೂಟಕ್ಕೆ ಇನ್ನೂ ಹೆಚ್ಚು ಮಹಿಳೆಯರನ್ನು ಸೆಳೆಯುವ ಮೂಲಕ ಒಕ್ಕೂಟವನ್ನು ಸದೃಢಗೊಳಿಸಲಾಗುವುದು ಎಂದು ತಿಳಿಸಿದರು.
ಗ್ರಾಮದ ಹಿರಿಯರಾದ ವಸಂತಮ್ಮ ಸೇರಿದಂತೆ ನಾಲ್ವರು ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. ವಲಯ ಮೇಲ್ವಿಚಾರಕರಾದ ಅಬ್ದುಲ್ ನಹಿಮ್, ಅಭಿಜಿತ್, ಮಹಿಳಾ ಸಂಘದ ಪುಷ್ಪಾ ಪ್ರಸನ್ನ, ನಮನಾ ಜೈರಾಮ್, ಕಲ್ಪನಾ ವೀರೇಂದ್ರ, ಮೇಘಾ ಜಗದೀಶ್, ಕಾವ್ಯಾ ಹರೀಶ್ ಇತರರಿದ್ದರು.