ವಿಜಯಪುರ: ಪರಿಸ್ಥಿತಿ ಯಾವುದೇ ಇದ್ದರೂ ಅದು ಸಾಧನೆಗೆ ಮುಳ್ಳಾಗದಂತೆ ನೋಡಿಕೊಳ್ಳಬೇಕಾದ ಎದೆಗಾರಿಕೆ ಬೆಳೆಸಿಕೊಂಡು ಛಲದಿಂದ ಮುನ್ನುಗ್ಗಬೇಕು. ಆಗ ಯಶಸ್ಸು ತನ್ನಿಂದ ತಾನೆ ಬರುತ್ತದೆ ಎಂದು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ$್ಮಣ ನಿಂಬರಗಿ ಹೇಳಿದರು.
ನಗರದ ಬಿಎಲ್ಡಿಇ ಸಂಸ್ಥೆಯ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರ ಪ್ರಸಕ್ತ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇಂಡಕ್ಷನ್ ಪ್ರೋಗ್ರಾಂ ಹಂತ&2ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಹೆಮ್ಮೆಯ ರಾಷ್ಟ್ರಪತಿಯಾಗಿದ್ದ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಎಷ್ಟೇ ಸಂಕಷ್ಟ ಸ್ಥಿತಿಯಲ್ಲಿದ್ದರೂ ಅದನ್ನು ಲೆಕ್ಕಿಸದೆ ಲೋಕವೇ ಕೊಂಡಾಡುವಷ್ಟು ಬೆಳೆದಿದ್ದು ನಮ್ಮ ಕಣ್ಣಮುಂದಿದೆ. ಇಂಥಹ ಮಹನೀಯರ ಬದುಕೇ ಸ್ಫೂರ್ತಿದಾಯಕ ಎಂದರು.
ಪ್ರಾಚಾರ್ಯ ಡಾ. ವಿ.ಜಿ. ಸಂಗಮ ಮಾತನಾಡಿ, ಇಂಡನ್ ಪ್ರೋಗ್ರಾಂನಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳು ಉತ್ತಮವಾಗಿದ್ದು, ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆಯುವಂತೆ ಸಲಹೆ ನೀಡಿದರು.
ಹತ್ತು ದಿನಗಳ ಕಾರ್ಯಕ್ರಮದಲ್ಲಿ ಸಶಸ ಪಡೆಗಳಲ್ಲಿ ವೃತ್ತಿ ಬೆಳವಣಿಗೆ, ಸೈಬರ್ ಭದ್ರತೆ, ಕಾನೂನು ಅರಿವು, ಭವಿಷ್ಯದ ಸಾರಿಗೆ ಮತ್ತು ವಿದ್ಯುತ್ ಸುರತೆ ಅಂತಹ ವೈವಿದ್ಯಮಯ ವಿಷಯಗಳ ಒಳಗೊಂಡ ವಿಷಯ ತಜ್ಞರಿಂದ ಉಪನ್ಯಾಸ ಮತ್ತು ವಿಚಾರ ಗೋಷ್ಠಿಗಳು ನಡೆಯಲಿವೆ. ಜತೆಗೆ ಯೋಗ ಫಿಟ್ನೆಸ್, ಕ್ರೀಡಾ ಚಟುವಟಿಕೆಯಲ್ಲಿ ತೊಡಗುವಿಕೆಯ ಕುರಿತು ಕಾರ್ಯಕ್ರಮ ಜರುಗಲಿವೆ.
ಡಾ. ಅನುರಾಧಾ ಟಂಕಸಾಲಿ ಅವರು ಇಂಡಕ್ಷನ್ ಪ್ರೋಗ್ರಾಂ&2 ಹಂತದ ಪರಿಚಯ ಮಾಡಿದರು. ಉಪ ಪ್ರಾಚಾಯೆರ್ ಡಾ. ಲೀನಾ ರಾಗಾ ಉಪಸ್ಥಿತರಿದ್ದರು. ಡಾ. ಅಶ್ವಿನಿ ಅಂಗಡಿ ನಿರೂಪಿಸಿದರು. ಕೆ.ಎ. ಕಲಗೊಂಡ ವಂದಿಸಿದರು.