ಜಿಲ್ಲೆ

ಪುಸ್ತಕ, ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಿ

ಉತ್ತರ ಕನ್ನಡ ಡೆಸ್ಕ್

ಉಪ್ಪಿನಬೆಟಗೇರಿ: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹಾವಳಿಯಿಂದಾಗಿ ಚಿಕ್ಕವರಿಂದ ದೊಡ್ಡವರು ಹಾಗೂ ವಿದ್ಯಾರ್ಥಿಗಳು ಪುಸ್ತಕ ಓದುವುದನ್ನೇ ಕಡೆಗಣಿಸಿದ್ದಾರೆ ಎಂದು ಕರ್ನಾಟಕ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ತವನಪ್ಪ ಅಷ್ಟಗಿ ಅಭಿಪ್ರಾಯಪಟ್ಟರು.

ಗ್ರಾಮದಲ್ಲಿ ಗ್ರಾಪಂ ವತಿಯಿಂದ ನೂತನವಾಗಿ ನಿರ್ಮಿಸಿದ ಸಾರ್ವಜನಿಕ ಗ್ರಂಥಾಲಯ ಕೇಂದ್ರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬ ನಾಣ್ಣುಡಿಯಂತೆ ಪ್ರತಿಯೊಬ್ಬರೂ ಪುಸ್ತಕ ಹಾಗೂ ದಿನ ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಒಂದು ಒಳ್ಳೆಯ ಪುಸ್ತಕ ಸಾವಿರ ಸ್ನೇಹಿತರಿಗೆ ಸಮವಾಗಿರುತ್ತದೆ. ಯಾರು ತಿಳಿಸಿ ಕೊಡದ ಗಮನಾರ್ಹ ವಿಷಯಗಳನ್ನು ಪುಸ್ತಕಗಳು ತಿಳಿಸಿಕೊಡುತ್ತವೆ ಎಂದರು.

ಗ್ರಾಪಂ ಅಧ್ಯಕ್ಷ ಬಸೀರ್ ಅಹ್ಮದ್ ಮಾಳಗಿಮನಿ ಮಾತನಾಡಿದರು. ಜಿ.ಆರ್. ಜವಳಗಿ, ಗ್ರಾಪಂ ಉಪಾಧ್ಯಕ್ಷೆ ಛಾಯಾ ಹೆಗಡೆ, ಪಿಡಿಒ ಬಾವಾಖಾನವರ, ಕಾರ್ಯದರ್ಶಿ ವಿ.ಬಿ. ಹಂದೂರ, ಗ್ರಂಥಪಾಲಕ ಶ್ರೀಧರ ದೊಡಮನಿ, ಮಂಜುನಾಥ ಮಸೂತಿ, ಮಹಾವೀರ ಅಷ್ಟಗಿ, ಮಡಿವಾಳಪ್ಪ ಶಿಂದೋಗಿ, ಸದ್ದಾಂ ಲಂಗೋಟಿ, ಸೈಯದ್ ಮದ್ನಿ, ಉಮೇಶ ಕುರಗುಂದ, ಮಹಾಂತೇಶ ಬೊಬ್ಬಿ, ಸೋಮು ಅಂಗಡಿ, ಶಬ್ಬೀರ ಮಕಾಂದಾರ, ಸಾಹಿರಾಬಾನು ಲಾಲ್ಮಿಯಾ, ಲಕ್ಷ್ಮೀ ಆಯಟ್ಟಿ, ವಿಜಯಲಕ್ಷ್ಮೀ ನವಲಗುಂದ, ಗ್ರಾಪಂ ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು. ಫಕೀರಪ್ಪ ಶಿವಳ್ಳಿ, ವಿರೂಪಾಕ್ಷಪ್ಪ ಬಮ್ಮಶೆಟ್ಟಿ ನಿರ್ವಹಿಸಿದರು.