ರೋಣ: ವಿದ್ಯಾರ್ಥಿ ಜೀವನ ಬಂಗಾರದ ಜೀವನವಾಗಿದ್ದು, ಎಲ್ಲ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಬೇಕು. ಮಕ್ಕಳಲ್ಲಿ ಕ್ರೀಡಾಮನೋಭಾವನೆ ಬೆಳೆಸಬೇಕು ಎಂದು ಹುಲ್ಲೂರ ಗ್ರಾಮದ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಮಲ್ಲಮ್ಮ ತಳವಾರ ಹೇಳಿದರು.
ತಾಲ್ಲೂಕಿನ ಹುಲ್ಲೂರ ಗ್ರಾಮದಲ್ಲಿ ಗುರುವಾರ ವೆಂಕನಗೌಡ ಹನುಮಂತಗೌಡ ಕೆಂಚನಗೌಡ್ರ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಜರುಗಿದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಸರ್ಕಾರಿ ಕಾಲೇಜಿನಲ್ಲಿ ಎಲ್ಲ ಸೌಲಭ್ಯ ಇದ್ದರೂ ವಿದ್ಯಾರ್ಥಿಗಳನ್ನು ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳಲ್ಲಿನ ಎಸ್ಸೆಸ್ಸೆಲ್ಸಿ ಪಾಸಾದ ಮಕ್ಕಳನ್ನು ಕರೆತಂದು ಕಾಲೇಜಿಗೆ ಸೇರಿಸಿ ವಿದ್ಯಾರ್ಥಿಗಳ ಕೊರತೆ ನೀಗಿಸಬೇಕು ಎಂದು ಗ್ರಾಮಸ್ಥರಿಗೆ ವಿನಂತಿಸಿದರು. ಎಸ್.ಎಂ. ಮಸಗಿ, ವೈ.ಎನ್. ಹೊಸಮನಿ, ಬಿ.ಬಿ. ನರಸಣ್ಣವರ, ವಿ.ಬಿ. ಕೆಂಚನಗೌಡ್ರ, ಸಿ.ಎಸ್. ಹಿರೇಗೌಡ್ರ, ಎಸ್.ಕೆ. ಕಲ್ಲಗುಡಿ, ಎಸ್.ಎಸ್. ಮೆಣಸಗಿ, ಆರ್.ಎನ್.ಜೋಶಿ, ಎಸ್.ಆರ್. ವಡ್ಡರ, ಎಂ.ಟಿ. ಆರೇರ ಉಪಸ್ಥಿತರಿದ್ದರು.