ಭದ್ರಾವತಿ: ಹೆಣ್ಣು ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿರುವುದು ಹೆಮ್ಮೆಯ ವಿಷಯ. ಹೆಣ್ಣು ಮಕ್ಕಳು ಸ್ವ-ಉದ್ಯೋಗದ ಜತೆಗೆ ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಎಂದು ನಗರಸಭೆ ಸಿಎಒ ಸುಹಾಸಿನಿ ತಿಳಿಸಿದರು.
ನಗರದ ಸೇಂಟ್ ಚಾರ್ಲ್ಸ್ ಕರುಣಾ ಸೇವಾ ಕೇಂದ್ರ ಮತ್ತು ಕರುಣಾ ಮಹಿಳಾ ಮಂಡಳಿ ಒಕ್ಕೂಟದ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಿಸ್ಟರ್ ಹೆಲನ್ ಮೋರಸ್ ಅವರು ಮಾನವ ಕಳ್ಳ ಸಾಗಾಣಿಕೆ ಬಗ್ಗೆ ಅರಿವು ಮೂಡಿಸಿದರು.
150 ಮಹಿಳೆಯರು ಉಪಸ್ಥಿತರಿದ್ದರು. ವಿಶೇಷ ಅಗತ್ಯತೆಯುಳ್ಳ ಮಕ್ಕಳ ಶಾಲೆಯ ಮುಖ್ಯಸ್ಥೆ ಸಿಸ್ಟರ್ ಪ್ರಭಾ ಕರುಣಾ ಮಹಿಳಾ ಮಂಡಳಿಗಳ ಅಧ್ಯಕ್ಷೆ ಧನಲಕ್ಷ್ಮೀ, ಒಕ್ಕೂಟದ ಸದಸ್ಯ ಅಲ್ಫೋನ್ಸ್, ಕಾರ್ಯಕರ್ತೆ ಗ್ರೇಸಿ ವಿನ್ನಿ ಇದ್ದರು.