ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯ ರಾಜೇಂದ್ರ ನಗರದಲ್ಲಿನ ಓರಿಯಂಟಲ್ ಪಬ್ಲಿಕ್ ಸ್ಕೂಲ್ನಲ್ಲಿ ಸಂಸ್ಥಾಪಕರ ದಿನ ಹಾಗೂ ಚುನಾಯಿತ ಮಕ್ಕಳ ಪದಗ್ರಹಣ ಸಮಾರಂಭವನ್ನು ಗುರುವಾರ ಏರ್ಪಡಿಸಲಾಗಿತ್ತು.
ಸ್ಕೂಲ್ ಸಂಸ್ಥಾಪಕ ಕೃಷ್ಣಾ ಜೆ.ಕೆ. ಅವರು ಚುನಾಯಿತ ಮಕ್ಕಳಿಗೆ ಬ್ಯಾಡ್ಜ್ ವಿತರಿಸಿ ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ನಾಗರಿಕರು. ಭಾರತದ ಭವಿಷ್ಯ ಯುವಕರ ಮೇಲೆ ನಿಂತಿದೆ. ಈಗಿನಿಂದಲೇ ದೇಶದ ಭವಿತವ್ಯ ಅರಿತು ಅಡಿ ಇಡಬೇಕು. ನಾಯಕರಾಗುವ ಗುಣಲಕ್ಷಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಲೆಯ ಕ್ಯಾಪ್ಟನ್ ಆಗಿ ಬಸವಜ್ಯೋತಿ ಅಣ್ಣಿಗೇರಿ, ಬುಶ್ರಾ ಫಾತೀಮಾ, ಇತರ ವಿದ್ಯಾರ್ಥಿಗಳು ವಿವಿಧ ಹುದ್ದೆ ಪಡೆದು ಪದಗ್ರಹಣ ಸ್ವೀಕರಿಸಿದರು. ನಂತರ ಎಲ್ಲರಿಗೂ ಸಿಹಿ ಹಂಚಲಾಯಿತು.
ಶಾಲೆ ಅಧ್ಯಕ್ಷೆ ಅನುಷಾ, ನಿರ್ದೇಶಕ ವಿಶ್ವಜೀತ ಜೋಗಿ, ಪ್ರಾಚಾರ್ಯು ಕೆ. ರಾಜೇಶ್ವರಿ, ಮುಖ್ಯೋಪಾಧ್ಯಾಯಿನಿಯರಾದ ರಶ್ಮಿ ಬಾಡಗಿ, ಭಾರತಿ ನೆನಕ್ಕಿ ಇತರರು ಉಪಸ್ಥಿತರಿದ್ದರು.