ತೇರದಾಳದ ಬಸವನಗುಡಿ ಸರ್ಕಾರಿ ಎಲ್‌ಪಿಎಸ್ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಯಿತು. ಶಿಕ್ಷಕ ಧನಂಜಯ ಜಮಖಂಡಿ, ಪ್ರಕಾಶ ಹವಾಲ್ದಾರ ಇದ್ದಾರೆ.  
ಜಿಲ್ಲೆ

ಸಂಶೋಧನಾ ಮನೋಭಾವ ರೂಢಿಸಿಕೊಳ್ಳಿ

ವಿನಯ ಆಶೋಕ ನಾಯ್ಕ

ತೇರದಾಳ: ಬಸವನ ಗುಡಿ ಸರ್ಕಾರಿ ಎಲ್‌ಪಿಎಸ್ ಶಾಲೆಯಲ್ಲಿ ಶುಕ್ರವಾರ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಯಿತು. ಮಕ್ಕಳು ವಿವಿಧ ವಿಜ್ಞಾನ ವಸ್ತುಗಳನ್ನು ತಯಾರಿಸಿ ಪ್ರದರ್ಶಿಸಿದರು. ನಂತರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಶಿಕ್ಷಕ ಧನಂಜಯ ಜಮಖಂಡಿ ಮಾತನಾಡಿ, ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ದಿನೇದಿನೆ ಬೆಳೆಯುತ್ತಿದೆ. ವಿದ್ಯಾರ್ಥಿಗಳು ಸಂಶೋಧನಾ ಮನೋಭಾವ ರೂಢಿಸಿಕೊಂಡು ಹೊಸ ಆಲೋಚನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಶಿಕ್ಷಕರಾದ ಪ್ರಕಾಶ ಹವಾಲ್ದಾರ್, ವಿರೂಪಾಕ್ಷ ಕೀರಪುರ ಮಕ್ಕಳಿಗೆ ವಿಜ್ಞಾನದ ಕುರಿತು ಹಾಗೂ ಸಾಧಕರ ಕುರಿತು ಮಾಹಿತಿ ನೀಡಿದರು.