ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಸರ್ಕಾರದ ಬಿಟ್ಟಿ ಯೋಜನೆಗಳಿಗೆ ಮರುಳಾಗಿ ಈಗ ಜಮೀನುಗಳನ್ನೇ ಕಳೆದುಕೊಳ್ಳುವಂತಹ ಪರಿಸ್ಥಿತಿ ಬರುತ್ತಿದೆ. ಹೀಗಾಗಿ ನಾವೆಲ್ಲರೂ ಜಾಗೃತಿ ಮೂಡಿಸಿಕೊಂಡು, ಪ್ರಶ್ನೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಹೇಳಿದರು.
ಅವರು ದೀಪಾವಳಿ ಪ್ರಯುಕ್ತ ಬಿಜೆಪಿ ಯುವ ಮೋರ್ಚಾ ವತಿಯಿಂದ ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ನಡೆದ ದೋಸೆ ಹಬ್ಬದಲ್ಲಿ ಮಾತನಾಡಿ, ತುಳುನಾಡಿನಲ್ಲಿ ಪ್ರತಿ ಮನೆಯಲ್ಲಿ ಗೋರಕ್ಷಕರು ಇರುವುದು ಸಂತಸದ ಸಂಗತಿ. ಇಲ್ಲಿನ ಪರಂಪರೆಯನ್ನು ಯುವ ಮೋರ್ಚಾ ಮುಂದುವರಿಸುತ್ತಿರುವುದು ಮಹತ್ತರವಾದ ವಿಚಾರವಾಗಿದೆ. ಇಲ್ಲಿನಂತೆ ಬಯಲುಸೀಮೆಯಲ್ಲಿ ಶಕ್ತಿಯುತ ಹಿಂದುತ್ವದ ನಾಯಕರು, ಗಟ್ಟಿ ಕಾರ್ಯಕರ್ತರು ಇಲ್ಲದಿರುವುದು ವಿಷಾದದ ಸಂಗತಿ. ಪಕ್ಷದ ಕಾರ್ಯಕ್ರಮವನ್ನೇ ಹಿಂದುತ್ವದ ಕಾರ್ಯವೆಂಬಂತೆ ಮಾಡುತ್ತಿರುವ ಪೂಂಜ ಅವರು ಮುಂಬರುವ ದಿನಗಳಲ್ಲಿ ಮಂತ್ರಿಯಾಗಿ ದೋಸೆ ಹಬ್ಬ ನಡೆಸಬೇಕು ಎಂದರು.
ಶಾಸಕ ಹರೀಶ್ ಪೂಂಜ ಮಾತನಾಡಿ, ಹಿಂದುತ್ವದ ರಾಜಕಾರಣ ಮಾಡದಿದ್ದರೆ ಮುದೊಂದು ದಿನ ನಾವೆಲ್ಲ ಸುನ್ನತ್ ಮಾಡಿಸಿಕೊಳ್ಳುವ ಕಾಲ ಬರಬಹುದು ಎಂದು ಎಚ್ಚರಿಸಿದರು. ಹಿಂದುತ್ವ ಇದ್ದರೆ ಮಾತ್ರ ಭಾರತ ಭಾರತವಾಗಿಯೇ ಇರಲು ಸಾಧ್ಯ ಎಂದರು.
ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ಕಿಶೋರ್ ಕುಮಾರ್, ಬಿರ್ವೆರ್ ಕುಡ್ಲದ ಉದಯ, ವಕೀಲೆ ಸಹನಾ ಕುಂದರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ ಕೋಟ್ಯಾನ್, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ್, ಮಂಡಲಾಧ್ಯಕ್ಷ ಶ್ರೀನಿವಾಸ, ಪ್ರಧಾನ ಕಾರ್ಯದರ್ಶಿ ಪ್ರಶಾಂತ ಪಾರೆಂಕಿ, ಜಿಲ್ಲಾ ಮಾಧ್ಯಮ ಪ್ರಕೋಷ್ಠ ಸಂಚಾಲಕ ವಸಂತ, ಸೀತಾರಾಮ ಬೆಳಾಲು, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ ಉಪಸ್ಥಿತರಿದ್ದರು.
ಯುವ ಮೋರ್ಚಾ ತಾಲೂಕಾಧ್ಯಕ್ಷ ಶಶಿರಾಜ್ ಶೆಟ್ಟಿ ಸ್ವಾಗತಿಸಿದರು. ಸತೀಶ್ ಹೊಸ್ಮಾರ್ ಸ್ವಾಗತಿಸಿ ನಿರೂಪಿಸಿದರು.
ನೃತ್ಯ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇದಕ್ಕೂ ಮೊದಲು ಗೋಪೂಜೆ, ಕುಣಿತ ಭಜನೆ ನಡೆಯಿತು. ನಂತರ ಭಜನೆ, ನೃತ್ಯ ಸ್ಪರ್ಧೆ,ಗೋಪೂಜೆ, ತುಳು ನಾಟಕ ನಡೆಯಿತು.
ಉಳುವವನೇ ಭೂಮಿಯ ಒಡೆಯ ಎಂದು ದೇವರಾಜ ಅರಸರು ಕಾನೂನನ್ನು ತಂದರೆ, ಸಿದ್ಧರಾಮಯ್ಯ ಅವರು ಅದೇ ಭೂಮಿಗಳನ್ನು ಹಿಂಪಡೆಯುವ ಕೆಲಸ ಮಾಡಿ ಕಾನೂನಿಗೆ ಅಗೌರವ ತೋರಿಸುತ್ತಿದ್ದಾರೆ. ಅಲ್ಲಾನ ಹೆಸರಿನಲ್ಲಿ ವಶಪಡಿಸಿಕೊಂಡ ಭೂಮಿಗಳನ್ನು ಮತ್ತೇ ಮರಳಿ ಪಡೆದೇ ಪಡೆಯಲಿದ್ದೇವೆ. ಎದೆಯುಬ್ಬಿಸಿ ಹೋರಾಟ ಮಾಡಲಿದ್ದೇವೆ. - ಪುನೀತ್ ಕೆರೆಹಳ್ಳಿ, ರಾಷ್ಟ್ರ ರಕ್ಷಣಾ ಪಡೆ https://www.vijayavani.net/our-cultural-heritage-is-alive-for-future-generations https://www.vijayavani.net/gopuja-in-kukke-temple