ವಿಜಯಪುರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಅಥ್ಲೆಟಿಕ್ಸ್ ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದ ಅಥ್ಲೆಟಿಕ್ಸ್ ಸ್ಪೋರ್ಟ್ಸ್ ಕ್ಲಬ್ ತಂಡಕ್ಕೆ ಪ್ರಶಸ್ತಿ ವಿತರಿಸಲಾಯಿತು. ಫಯಾಜ್ ಕಲಾದಗಿ, ಸಾಧಿಕ ಜಾನ್ವೇಕರ, ಶಫೀಕ ಜಾಗೀರದಾರ ಮತ್ತಿತರಿದ್ದಾರೆ. 
ಜಿಲ್ಲೆ

ಕ್ರೀಡಾಭಿಮಾನ ಬೆಳೆಸಿಕೊಳ್ಳಿ

ವಿಜಯಪುರ: ಹಿಂದೆ ಗುರು ಮತ್ತು ಮುಂದೆ ಗುರಿಯನ್ನರಿಸಿದರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಸಾಮಾಜಿಕ ಕಾರ್ಯಕರ್ತ ಫಯಾಜ್ ಕಲಾದಗಿ ಹೇಳಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ವಿಜಯಪುರ ಅಥ್ಲೆಟಿಕ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ 14 ರಿಂದ 17 ವಯೋಮಿತಿಯ ಬಾಲಕ, ಬಾಲಕಿಯರ ಅಥ್ಲೆಟಿಕ್ಸ್ ಸ್ಪರ್ಧೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ರೀಡೆಯಿಂದ ದೈಹಿಕ, ಮಾನಸಿಕವಾಗಿ ಸದೃಢಗೊಳ್ಳಲು ಸಾಧ್ಯ. ಪ್ರತಿಯೊಬ್ಬರೂ ಕ್ರೀಡಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಿವೃತ್ತ ದೈಹಿಕ ನಿರ್ದೇಶಕ ಡಾ.ಅಶೋಕಕುಮಾರ ಜಾಧವ ಮಾತನಾಡಿ, ಕ್ರಿಕೆಟ್ ಅಲ್ಲದೆ, ಪ್ರತಿಯೊಂದು ಕ್ರೀಡೆಗಳಲ್ಲಿ ನಮ್ಮ ವಿಜಯಪುರ ಜಿಲ್ಲೆಯ ಸಾಧಕರು ಮಿಂಚಬೇಕು. ಕ್ರಿಕೆಟ್ ಕ್ರೀಡೆಯನ್ನು ಪ್ರತಿಯೊಬ್ಬರೂ ಆರಾಧಿಸುತ್ತಾರೆ. ಅದರಂತೆ ಪ್ರತಿಯೊಂದು ಕ್ರೀಡೆಗಳನ್ನು ಆರಾಧಿಸಿದರೆ ಕ್ರೀಡೆಯಲ್ಲಿ ಕ್ರೀಡಾಸಕ್ತರು ಯಶಸ್ವಿ ಗಳಿಸಲು ಸಾಧ್ಯ ಎಂದರು.

ಸ್ಪರ್ಧೆಯ ಓವರ್ ಆಲ್ ಚಾಂಪಿಯನ್ ಆಗಿ ವಿಜಯಪುರ ಅಥ್ಲೆಟಿಕ್ಸ್ ಸ್ಪೋರ್ಟ್ಸ್ ಕ್ಲಬ್ ಪ್ರಥಮ ಬಹುಮಾನ ಪಡೆದಿದ್ದು, ಸಂತ ಜೋಶೆಫ್ ಶಾಲೆ ಕ್ರೀಡಾಪಟುಗಳು ದ್ವಿತೀಯ ಬಹುಮಾನ ಪಡೆದರು. ಎಚ್.ಎಸ್. ಕಬಾಡೆ, ಗಣೇಶ ಭೋಸಲೆ, ಸಾಧಿಕ ಜಾನ್ವೇಕರ, ಶಫೀಕ ಜಾಗೀರದಾರ, ಸಂತೋಷ ರಾಠೋಡ, ಮಹಮ್ಮದ್ ಇರ್ಫಾನ ಹಿಟ್ನಳ್ಳಿ, ಗೋಪಾಲ ಲಮಾಣಿ, ಮುಸ್ತಾಕ ಹಾದಿಮನಿ, ಅಬ್ದುಲ ಮಾಣಿಕ, ಪ್ರೀತಿ ಕಾಳೆ ವೇದಿಕೆಯಲ್ಲಿದ್ದರು.

ಸಂಸ್ಥೆ ಸದಸ್ಯರಾದ ಶ್ರೀಧರ ರಾಠೋಡ, ಅಮಿತ ತಳವಾರ, ಶ್ರವಣ ಚವ್ಹಾಣ, ಈರಯ್ಯ ಲಕ್ಕುಂಡಿಮಠ, ಬಸವರಾಜ ನಾಗೋಡ, ದಾನಯ್ಯ ಮಠಪತಿ, ಲಕ್ಷ್ಮೀ ಕಮತಗಿ, ಸೃಷ್ಟಿ ಹನುಮಗೊಂಡ, ಮಲ್ಲಿಕಾರ್ಜುನ ಪೂಜಾರಿ, ರಕ್ಷಿತಾ ಬಾವುಚಿ, ಸುನೀಲ ಗೊಳವೆ, ಮಹಾದೇವ ಗೊರವ, ಯಶವಂತ ತಗ್ಗಿನಮನಿ, ಸಂದೀಪ ರಾಠೋಡ ಮತ್ತಿತರರಿದ್ದರು.