ವಿಜಯಪುರ: ಓದುವುದರಿಂದ ಮಕ್ಕಳಲ್ಲಿ ಸ್ಮರಣಶಕ್ತಿ, ಏಕಾಗ್ರತೆ ಸುಧಾರಿಸುತ್ತದೆ. ಓದುವುದು ನಮ್ಮ ಕಲ್ಪನೆ ಮತ್ತು ಸೃಜನಶೀಲತೆಗೆ ಇಂಧನ ನೀಡುತ್ತದೆ ಎಂದು ಶಿಕ ಸಂತೋಷ ಬಂಡೆ ಹೇಳಿದರು.
ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ "ರಾಷ್ಟ್ರೀಯ ಓದುವ ದಿನ'ದ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಓದು& ಪುಸ್ತಕ ಓದು ಎಂಬ ಚಿಂತನ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪುಸ್ತಕ ಓದುವ ಹವ್ಯಾಸ ನಿತ್ಯ ನಿರಂತರವಾಗಿರಲಿ ಎಂದು ಸಲಹೆ ನೀಡಿದರು. ಕೆಪಿಎಸ್ ಶಾಲೆ ಮುಖ್ಯಶಿಕ ಎಸ್.ಆರ್. ರೇವತಾಗಾಂವ ಜ್ಯೋತಿ ಬೆಳಗಿಸಿ ಮಾತನಾಡಿ, ಓದುವುದರಿಂದ ನಮ್ಮ ಶಬ್ದಕೋಶ ವಿಸ್ತಾರವಾಗಿ ಭಾಷಾ ಕೌಶಲ ವೃದ್ಧಿಯಾಗುತ್ತದೆ. ಓದುವುದು ನಮ್ಮ ಅರಿವಿನ ಬೆಳವಣಿಗೆ ಉತ್ತೇಜಿಸಿ, ಭಾವನಾತ್ಮಕ ಯೋಗೇಮ ಹೆಚ್ಚಿಸುವ ಮೂಲಕ ಸೃಜನಶೀಲತೆ ಪೋಷಿಸುತ್ತದೆ ಎಂದು ತಿಳಿಸಿದರು.
ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಮಾತನಾಡಿದರು. ಶಿಕರಾದ ಸಂತೋಷ ಹಳ್ಳಿಕೇರಿ, ಎನ್.ಎಸ್. ಪಾಟೀಲ, ಸಂತೋಷ ಪವಾರ, ಬಿ.ಡಿ. ಸಿನಖೇಡ, ಆನಂದ ಗಂಗನಳ್ಳಿ ಮತ್ತಿತರರಿದ್ದರು.