ಜಿಲ್ಲೆ

ಭವಿಷ್ಯವಾಣಿ ಬರೆದಿದ್ದಾರೆ ತಿಂಥಣಿ ಮೌನೇಶ್ವರ

ಪ್ರವೀಣ ಉದುಸಾ ದಲಬಂಜನ್

ದೇವದುರ್ಗ: ಪಟ್ಟಣದ ಅಬ್ಬು ಮೊಹಲ್ಲಾ ಏರಿಯಾದಲ್ಲಿರುವ ಜಗದ್ಗುರು ತಿಂಥಣಿ ಶ್ರೀಮೌನೇಶ್ವರ ದೇವಸ್ಥಾನದಲ್ಲಿ ತೊಟ್ಟಿಲು ಕಾರ್ಯಕ್ರಮ ಭಾನುವಾರ ಅದ್ದೂರಿಯಾಗಿ ಜರುಗಿತು.

ಹೊಸ್ತಿಲ ಹುಣ್ಣಿಮೆ ನಿಮಿತ್ತ ಶ್ರೀ ಮೌನೇಶ್ವರ ದೇವರಿಗೆ ಶ್ರದ್ಧಾಭಕ್ತಿಯಿಂದ ತೊಟ್ಟಿಲು, ವಿಶೇಷ ಪೂಜೆ ಕಾರ್ಯಕ್ರಮ ನಡೆಯಿತು. ನಂತರ ಮಹಿಳೆಯ ಕುಂಭ, ಕಳಸದೊಂದಿಗೆ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಅಂಗಳ ಬಾವಿಯಿಂದ ಪ್ರಮುಖ ರಸ್ತೆಯ ಮುಖಾಂತರ ದೇವಸ್ಥಾನದವರೆಗೆ ಮೆರವಣಿಗೆ ಜರುಗಿತು. ಬಾಜಾ, ಭಜಂತ್ರಿ, ಕಲಾವಿದರ ತಂಡದ ನೃತ್ಯ ಗಮನ ಸೆಳೆಯಿತು.

ಶ್ರೀಮೌನೇಶ್ವರರು ಕೋಣನ ಗವಿಯಲ್ಲಿ ಕುಳಿತು ಸಾವಿರಾರು ವಚನಗಳನ್ನು ಹಾಗೂ ನೂರಾರು ಭವಿಷ್ಯವಾಣಿಗಳನ್ನು ಬರೆದಿದ್ದಾರೆ. ಜಗದ್ಗುರು ಮೌನೇಶ್ವರ ಸಾಕಷ್ಟು ಪವಾಡಗಳನ್ನು ಮಾಡಿ ಹೊಸ್ತಿಲ ಹುಣ್ಣಿಮೆಯಂದು ತೊಟ್ಟಿಲು ಸೇವೆ ಬಯಸಿದ್ದರು. ಭಕ್ತರು ಪ್ರತಿವರ್ಷ ಹೊಸ್ತಿಲ ಸೇವೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಮಠದ ಮೌನೇಶ ತಾತ ಹೇಳಿದರು.

ಮುಖಂಡರಾದ ಮಲ್ಲಯ್ಯ ನಾಡದಾಳ, ಶಿವರಾಜ ಮಜ್ಜಿಗಿ, ನಾಗರಾಜ ಗೊಗಿ, ಹನುಮಂತ್ರಾಯ, ಮುದ್ದುರಾಜ ಗೋಸಲ, ಯಲ್ಲಪ್ಪ ಕುರ್ಲಿ, ಸಾಬಯ್ಯ ಬೆನಕಮುತ್ತಿ, ರಮೇಶ ಪತ್ತಾರ, ಬನ್ನಪ್ಪ, ದೇವೇಂದ್ರಪ್ಪ, ನಾಗಪ್ಪ ನಾಡದಾಳ, ಕರೆಪ್ಪ, ಕಾಂತು, ಶಿವರಾಜ ನಾಯಕ ಗೋಗಿ, ರಂಗಪ್ಪ ಮಜ್ಜಿಗಿ ಇತರರಿದ್ದರು.