ದೇವದುರ್ಗದ ಮಿನಿವಿಧಾನಸೌಧದಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಶಿರಸ್ತೇದಾರ್ ಭೀಮರಾಯ ಮೇಟಿ, ಗ್ರೇಡ್-2 ತಹಸೀಲ್ದಾರ್ ಗೋವಿಂದ ನಾಯಕ್, ಅನಿಲ್ ಕುಮಾರ್‌ಮ ಪ್ರವೀಣ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕರಾದ ಗಂಗಮ್ಮ, ಮೀನಾಕ್ಷಿ, ಲಕ್ಷ್ಮಿ ರಾಠೋಡ್, ನಿರ್ಮಲಾ ಇತರರಿದ್ದರು. 
ಜಿಲ್ಲೆ

ಅಪ್ಪಣ್ಣ ವಚನಗಳು ಸಮಾಜಕ್ಕೆ ದಾರಿದೀಪ: ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ

Gangavati - Shashidhara Shashidhara

ದೇವದುರ್ಗ: ಶರಣಾದಿ ಪ್ರಮಥರು ಸಮಾಜಕ್ಕೆ ವಚನಗಳ ಮೂಲಕ ಅಪಾರ ಕೊಡುಗೆ ನೀಡಿದ್ದಾರೆ. ಅವರಲ್ಲಿ ಒಬ್ಬರಾದ ಹಡಪದ ಅಪ್ಪಣ್ಣ ಕಾಯಕ ಹಾಗೂ ದಾಸೋಹ ಬಗ್ಗೆ ಕೊಟ್ಟಿರುವ ವಚನಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದು ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಹೇಳಿದರು.

ಪಟ್ಟಣದ ಮಿನಿವಿಧಾನಸೌಧದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭಾನುವಾರ ಮಾತನಾಡಿದರು. ಹಡಪದ ಅಪ್ಪಣ್ಣ ಅವರು ಜಗದ್ಯೋತಿ ಬಸವೇಶ್ವರ ಆಪ್ತ ಕಾರ್ಯದರ್ಶಿಯಾಗಿದ್ದರು. ಅಪ್ಪಣ್ಣ ರಚಿಸಿರುವ ವಚನಗಳು ಮನುಕುಲ ಉದ್ಧಾರಕ್ಕೆ ದಾರಿ ದೀಪವಾಗಿವೆ. ವಚನಗಳ ಮಾರ್ಗದಲ್ಲಿ ಪ್ರತಿಯೊಬ್ಬರೂ ನಡೆದರೆ ಸಮಾಜ ಅಭಿವೃದ್ಧಿ ಸಾಧ್ಯ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ್ ಮಾತನಾಡಿ, ಹಡಪದ ಅಪ್ಪಣ್ಣಡಿ ಕಾಯಕ ಯೋಗಿಯಾಗಿ ಕಾಯಕ ನಿಷ್ಠೆ, ಸರಳ ಜೀವನ, ಸೇವಾನಿಷ್ಠೆ, ಇವರ ಸದ್ಗುಣಗಳು ಬಸವಣ್ಣನವರಿಗೆ ಮೆಚ್ಚುಗೆಯಾಗಿದ್ದವು. ಅಪ್ಪಣ್ಣನವರು 243 ವಚನಗಳನ್ನು ಬರೆದಿದ್ದಾರೆ. ಪುಸ್ತಕ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶಕ ಕಚೇರಿಯಲ್ಲಿ ವಚನಗಳು ಕಂಡುಬರುತ್ತವೆ ಎಂದರು.

ಶಿರಸ್ತೇದಾರ್ ಭೀಮರಾಯ ಮೇಟಿ, ಗ್ರೇಡ್-2 ತಹಸೀಲ್ದಾರ್ ಗೋವಿಂದ ನಾಯಕ್, ಅನಿಲ್ ಕುಮಾರ್‌ಮ ಪ್ರವೀಣ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕರಾದ ಗಂಗಮ್ಮ, ಮೀನಾಕ್ಷಿ, ಲಕ್ಷ್ಮಿ ರಾಠೋಡ್, ನಿರ್ಮಲಾ, ಶಿವಪ್ಪ, ಎಚ್.ಶರಣಪ್ಪ, ಸಿ.ನಾಗಪ್ಪ, ಶರಣಪ್ಪ, ಯಮುನಪ್ಪ ಜಾಲಹಳ್ಳಿ, ತಿಮ್ಮಯ್ಯ, ಚಂದ್ರಶೇಖರ್, ಭೀಮಣ್ಣ ಹಡಪದ, ಶಾಂತಮಲ್ಲಯ್ಯ ಸ್ವಾಮಿ ಇದ್ದರು.