ದೇವದುರ್ಗ ತಾಲೂಕಿನ ಹೊನ್ನಟಗಿ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಹಾಗೂ ವಾರ್ಷಿಕೊತ್ಸವ ಕಾರ್ಯಕ್ರಮವನ್ನು ಆಶಾ ಕಾರ್ಯಕರ್ತೆ ಲಲಿತಾ ಉದ್ಘಾಟಿಸಿದರು. ಸಿಆರ್‌ಪಿ ಶಂಭುಲಿಂಗಪ್ಪ, ಮುಖ್ಯಶಿಕ್ಷಕ ಸಂಗಮೇಶ ಗಬ್ಬೂರು, ಶಿಕ್ಷಕರಾದ ಸಿದ್ದೇಶ್ ದಿದ್ದಿಗಿ, ಸಾಬಣ್ಣ ಮಾನಸಗಲ್, ಅಯ್ಯಪ್ಪ ಬುದ್ದಿನ್ನಿ, ಬಸನಗೌಡ ಇತರರಿದ್ದರು. 
ಜಿಲ್ಲೆ

ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ

ಶಾಮಸುಂದರ್ ಕೊಪ್ಪಳಕರ್

ದೇವದುರ್ಗ: ಶಿಕ್ಷಣ ಮನುಷ್ಯನನ್ನು ಪಜ್ಞಾವಂತ ನಾಗರಿಕನನ್ನಾಗಿ ಮಾಡುತ್ತದೆ. ಜ್ಞಾನದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಸಿಆರ್‌ಪಿ ಶಂಭುಲಿಂಗಪ್ಪ ಹೇಳಿದರು.

ತಾಲೂಕಿನ ಹೊನ್ನಟಗಿ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಬ್ಬರೂ ಶಿಕ್ಷಣವಂತರಾಗಲು ಸರ್ಕಾರ ಜಾರಿಗೊಳಿಸಿದ ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಉತ್ತಮ ಶಿಕ್ಷಣದೊಂದಿಗೆ ಮಕ್ಕಳನ್ನೇ ಆಸ್ತಿಯಾಗಿ ಬೆಳೆಸಬೇಕು ಎಂದು ಸಲಹೆ ನೀಡಿದರು.

ಮುಖ್ಯಶಿಕ್ಷಕ ಸಂಗಮೇಶ ಗಬ್ಬೂರು, ಶಿಕ್ಷಕರಾದ ಸಿದ್ದೇಶ್ ದಿದ್ದಿಗಿ, ಸಾಬಣ್ಣ ಮಾನಸಗಲ್, ಅಯ್ಯಪ್ಪ ಬುದ್ದಿನ್ನಿ, ಬಸನಗೌಡ, ಪ್ರಮುಖರಾದ ಶಾಂತಕುಮಾರ ಹೊನ್ನಟಗಿ, ಲಲಿತಾ ಏಸಪ್ಪ, ಹುಲಿಗೆಪ್ಪ, ಕಾಸಿಂಸಾಬ್, ಬಸವರಾಜ, ಯಲ್ಲಪ್ಪ, ನಿಂಗಪ್ಪ, ಜಾನಕಿಬಾಯಿ ಅಬ್ರಾಂ, ವೀರೇಶ ಪ್ರಜ್ವಲ್, ಮಹೇಶ, ಪ್ರಭಾವತಿ, ಬೃಂದಾ ಇತರರಿದ್ದರು.