ದೇವದುರ್ಗದಲ್ಲಿ ಶನಿವಾರ ಬಿಜೆಪಿ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು. ಮಂಡಲ ಅಧ್ಯಕ್ಷ ಶರಣಬಸವ ಪಾಟೀಲ್ ಜೋಳದಹೆಡಗಿ, ಅರಕೇರಾ ಮಂಡಲ ಅಧ್ಯಕ್ಷ ರಮೇಶ ರಾಠೋಡ್, ಪ್ರಮುಖರಾದ ಡಾ.ಬಸವರಾಜರೆಡ್ಡಿ, ಶಿವು ಪಾಣಿ, ಬಸನಗೌಡ ವೆಂಕಟಾಪುರ, ಪ್ರಕಾಶ ಪಾಟೀಲ್, ಜಂಬಣ್ಣ ನೀಲಗಲ್, ಅಮರೇಶ ಬಲ್ಲಿದ್, ನಾಗರಾಜ ಅಕ್ಕರಕಿ, ಬಸವರಾಜ ಅಕ್ಕರಕಿ, ಬಸವರಾಜ ಕೊಪ್ಪರ, ಸತೀಶ, ರಮೇಶ, ಕೊಳ್ಳಪ್ಪ ದೇಸಾಯಿ ಇತರರಿದ್ದರು. 
ಜಿಲ್ಲೆ

ಶ್ರದ್ಧಾಕೇಂದ್ರಕ್ಕೆ ಮಸಿ ಬಳಿಯುವ ಹುನ್ನಾರ

ಶ್ರೀನಾಥ

ದೇವದುರ್ಗ: ಶ್ರೀ ಕ್ಷೇತ್ರ ಧರ್ಮಸ್ಥಳದ ಅಪಪ್ರಚಾರ ಖಂಡಿಸಿ ಬಿಜೆಪಿ ತಾಲೂಕು ಘಟಕದ ಕಾರ್ಯಕರ್ತರು ಶನಿವಾರ ಪಟ್ಟಣದ ಜೆ.ಪಿ.ವೃತ್ತದಿಂದ ತಾಲೂಕು ಆಡಳಿತಸೌಧವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಹಿಂದುಗಳ ಶ್ರದ್ಧಾ ಕೇಂದ್ರವಾಗಿದೆ. ಇದರ ವಿರುದ್ಧ ಭಾರಿ ಕುತಂತ್ರ ನಡೆಯುತ್ತಿದ್ದು, ಶ್ರದ್ಧಾಕೇಂದ್ರಕ್ಕೆ ಮಸಿ ಬಳಿಯಲು ನಗರ ನಕ್ಸಲರು, ಧರ್ಮಾಂಧರು ಹುನ್ನಾರ ನಡೆಸಿದ್ದಾರೆ.

ಇವರಿಗೆ ಕಾಂಗ್ರೆಸ್ ಸರ್ಕಾರ ಪರೋಕ್ಷವಾಗಿ ಬೆಂಬಲಿಸಿ ಹಿಂದುಗಳ ಬಗ್ಗೆ ತನಗಿರುವ ಭಾವನೆ ಹೊರಹಾಕಿದೆ. ರಾಜ್ಯ ಸರ್ಕಾರದ ಓಲೈಕೆ ರಾಜಕಾರಣ ಮಿತಿಮೀರಿದ್ದು, ಹಿಂದುಗಳ ಭಾವನೆ ಕೆರಳುವಂತೆ ಮಾಡಿದೆ ಎಂದು ಗುಡುಗಿದರು.

ಧರ್ಮಸ್ಥಳಕ್ಕೆ ಕಳಂಕ ತರಲು ಬುರುಡೆ ಗ್ಯಾಂಗ್ ಹಾಗೂ ಎಡಚಿಂತನೆಯ ಟೂಲ್‌ಕಿಟ್ ಕೂಡ ಕುತಂತ್ರ ನಡೆಸಿದ್ದು, ಇದರ ಭಾಗವಾಗಿ ಸರ್ಕಾರದ ಮೇಲೆ ಒತ್ತಡ ಹಾಕಿ ಎಸ್‌ಐಟಿ ರಚಿಸಲಾಗಿದೆ. 15 ದಿನಗಳ ಕಾಲ 18ಕ್ಕೂ ಹೆಚ್ಚು ಗುಂಡಿ ಅಗೆದರೂ ಬುರುಡೆ ಸಿಕ್ಕಿಲ್ಲ.

ಈಗಲೂ ಸರ್ಕಾರ ಎಚ್ಚೆತ್ತುಕೊಂಡು ಕುತಂತ್ರ ನಡೆಸಿದವರ ವಿರುದ್ಧ ಕ್ರಮ ವಹಿಸದೆ ಕಾಲಹರಣ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ, ಕೂಡಲೇ ಸರ್ಕಾರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಬೇಕು. ಕುತಂತ್ರ ನಡೆಸಿದ ಬುರುಡೆ ಗ್ಯಾಂಗ್ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.