ದೇವದುರ್ಗದಲ್ಲಿ ಗ್ರೇಡ್-2 ತಹಸೀಲ್ದಾರ್ ಗೋವಿಂದ ನಾಯಕಗೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮನವಿ ಸಲ್ಲಿಸಿತು. ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪುರ, ಪ್ರಮುಖರಾದ ಬಸವರಾಜ ಜಯಂ, ವೆಂಕಟೇಶ ಜಾಲಹಳ್ಳಿ, ಕ್ರಾಂತಿಕುಮಾರ, ಮೌನೇಶ , ಅಬ್ರಾಹಂ ಕಮಲದಿನ್ನಿ ಇತರರಿದ್ದರು. 
ಜಿಲ್ಲೆ

ಹಲ್ಲೆ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳಿ

ಶಾಮಸುಂದರ್ ಕೊಪ್ಪಳಕರ್

ದೇವದುರ್ಗ: ವಿಜಯಪುರದಲ್ಲಿ ಮೂವರು ದಲಿತ ಕೂಲಿಕಾರರ ಮೇಲೆ ನಡೆದ ಹಲ್ಲೆ ಖಂಡಿಸಿ ಪಟ್ಟಣದ ತಾಲೂಕು ಕಚೇರಿ ಮುಂದೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮಂಗಳವಾರ ಪ್ರತಿಭಟನೆ ನಡೆಸಿತು.

ಜಮಖಂಡಿ ತಾಲೂಕಿನ ಚಿಕ್ಕಲಿಕಿ ಗ್ರಾಮದ ಮೂವರು ಕಾರ್ಮಿಕರಾದ ಸದಾಶಿವ, ಸದಾಶಿವ ಬಬಲಾದಿ, ಉಮೇಶ ಎನ್ನುವವರು ಗಾಂಧಿನಗರದ ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದರು. ಸಂಕ್ರಾಂತಿ ರಜೆ ನಿಮಿತ್ತ ಊರಿಗೆ ಹೋಗಿದ್ದು, ಮರಳಿ ಬರುವಾಗ ತಡವಾಗಿದೆ. ಇದನ್ನೇ ನೆಪಮಾಡಿ ಕೊಂಡು ಇಟ್ಟಂಗಿ ಭಟ್ಟಿ ಮಾಲೀಕ ಕೂಲಿಕಾರರ ಕೈಕಾಲುಕಟ್ಟಿ, ಮನಬಂದಂತೆ ಥಳಿಸಿದ್ದಾನೆ. ಇಂಥ ಘಟನೆ ರಾಜ್ಯವೇ ತಲೆತಗ್ಗಿಸುವಂತೆ ಮಾಡಿದೆ. ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಭಟ್ಟಿ ಮಾಲೀಕನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕೂಲಿಕಾರರಿಗೆ ಸೂಕ್ತ ಚಿಕಿತ್ಸೆ ಹಾಗೂ ಪರಿಹಾರ ನೀಡಬೇಕು. ಕೇಸ್ ದಾಖಲಿಸಿಕೊಳ್ಳುವ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದ ಸಿಪಿಐ

ಮಲ್ಲಯ್ಯ ಗೋಲಗುಂಬಜ್ ಅವರನ್ನು ತಕ್ಷಣ ಅಮಾನತು ಮಾಡಬೇಕು. ಮುಂದೆ ಇಂಥ ಘಟನೆ ನಡೆಯದಂತೆ ಗೃಹ ಇಲಾಖೆ ಮುಂಜಾಗ್ರತೆವಹಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪುರ, ಪ್ರಮುಖರಾದ ಬಸವರಾಜ ಜಯಂ, ವೆಂಕಟೇಶ ಜಾಲಹಳ್ಳಿ, ಕ್ರಾಂತಿಕುಮಾರ, ಮೌನೇಶ ಜಾಲಹಳ್ಳಿ, ಅಬ್ರಾಹಂ ಕಮಲದಿನ್ನಿ, ರವಿಚಂದ್ರ ಗುಂಟ್ರಾಳ, ಲಕ್ಷ್ಮಣ ಮಸರಕಲ್, ಕರಿಯಪ್ಪ ಮಸರಕಲ್, ಮಹಾದೇವ ಗೌರಂಪೇಟೆ, ಡೆವಿಡ್ ಮಸರಕಲ್, ಲಿಂಗಪ್ಪ ಗೌಡೂರು, ಭೀಮಣ್ಣ ಅಂಜಳ, ಹೊನ್ನಪ್ಪ ಗುಂಡಗುರ್ತಿ, ಮಹಾದೇವ ಗೌರಂಪೇಟೆ, ವಿಜಯಕುಮಾರ ಬಲ್ಲಿದವ್ ಇತರರಿದ್ದರು.