ದೇವದುರ್ಗದಲ್ಲಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ಅಹಿಂದ ಸಂಘಟನೆ ಮನವಿ ಸಲ್ಲಿಸಿತು. ತಾಲೂಕಾಧ್ಯಕ್ಷ ಎಸ್.ಬಿ.ಪೂಜಾರಿ ವಕೀಲ, ಮುಖಂಡರಾದ ಚಂದ್ರಶೇಖರ ಮುಂಡರಗಿ, ಬಸವರಾಜ ನಾಯಕ, ಯಂಕಣ್ಣ, ರಮೇಶ, ಹನುಮಂತ್ರಾಯ, ರಾಮಸ್ವಾಮಿ, ರಂಗಪ್ಪ, ಶಿವಣ್ಣ, ಶಿವರಾಜ, ನರಸಣ್ಣ ಇತರರಿದ್ದರು. 
ಜಿಲ್ಲೆ

ರೇಣುಕಸ್ವಾಮಿ ಪ್ರಕರಣ ನಿಷ್ಪಕ್ಷವಾಗಿ ತನಿಖೆ ಆಗಲಿ

ಪ್ರವೀಣ ಉದುಸಾ ದಲಬಂಜನ್

ದೇವದುರ್ಗ: ರೇಣುಕಸ್ವಾಮಿ ಕೊಲೆಗೈದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯಿಸಿ ಅಹಿಂದ ಸಂಘಟನೆ ಮುಖಂಡರು ಪಟ್ಟಣದಲ್ಲಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ಗುರುವಾರ ಮನವಿ ಸಲ್ಲಿಸಿದರು.

ನಟಿ ಪವಿತ್ರಾಗೌಡಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳಿಸಿದಕ್ಕೆ ರೇಣುಕಸ್ವಾಮಿಯನ್ನು ಕೊಲೆ ಮಾಡಲಾಗಿದೆ. ನಟ ದರ್ಶನ್ ಹಾಗೂ ಪವಿತ್ರಾಗೌಡ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಹಲವರನ್ನು ಈಗಾಗಲೇ ಬಂಧನ ಮಾಡಿರುವುದು ಸ್ವಾಗತಾರ್ಹ. ಪ್ರಕರಣ ನಿಷ್ಪಕ್ಷ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನು ಪ್ರಕಾರ ಶಿಕ್ಷೆ ನೀಡಬೇಕು. ರೇಣುಕಸ್ವಾಮಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವ ಜತೆಗೆ ಭದ್ರತೆ ಒದಗಿಸಬೇಕು. ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.