ಜಿಲ್ಲೆ

ದೇವಾಟ್‌ಪರಂಬಿನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸ್ವಾತಂತ್ರೊೃೀತ್ಸವ

reportermys

ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸಂಘಟನೆಯಿಂದ ಸೋಮವಾರ ದೇವಾಟ್‌ಪರಂಬಿನಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡುವುದರ ಮೂಲಕ ಸ್ವಾತಂತ್ರೊೃೀತ್ಸವ ಆಚರಿಸಲಾಯಿತು.

ಕೊಡವ ಬುಡಕಟ್ಟು ಕುಲ ಆದಮ್ಯ ರಾಷ್ಟ್ರೀಯತೆ ಮತ್ತು ಅಪ್ರತಿಮ ದೇಶಭಕ್ತಿಯಿಂದ ಸ್ವಾತಂತ್ರೃ ದಿನಾಚರಣೆ ಆಚರಿಸುತ್ತಿದೆ. ದೇಶವು ಸ್ವಾತಂತ್ರೃವಾಗುವಾಗ ಕೊಡವರ ಜನ್ಮಭೂಮಿ ಕೊಡಗು ಕೂಡ ಪ್ರತ್ಯೇಕ ಪ್ರಾಂತದ ಹೆಸರಿನಲ್ಲಿ ಸ್ವತಂತ್ರೃವಾಗಿತ್ತೆಂದು ಸಿಎನ್‌ಸಿ ಅಧ್ಯಕ್ಷ ನಂದಿನೆರವಂಡ ಯು. ನಾಚಪ್ಪ ಕೊಡವ ಹೇಳಿದರು.

ಸಂವಿಧಾನತವಾಗಿ ಸ್ವಾಯತ್ತ ಕೊಡವ ನೆಲೆ ಪಡೆದುಕೊಳ್ಳಲು ದೃಢ ಸಂಕಲ್ಪ ಮಾಡಲಾಗಿದೆ. ಕೊಡವರ ಭಾಷಾ ಸ್ವಾತಂತ್ರೃದ ಹಕ್ಕು ಹಾಗೂ ರಾಜಕೀಯ ಹಕ್ಕಿನ ಸ್ವಾತಂತ್ರೃ ಶಾಶ್ವತವಾಗಿ ಕಾಪಾಡುವಂತಾಗಬೇಕೆಂದರು. ಸಿಎನ್‌ಸಿ ಪ್ರಮುಖರಾದ ಕಲಿಯಂಡ ಪ್ರಕಾಶ್, ಲೆಫ್ಟಿನೆಂಟ್ ಕರ್ನಲ್ ಬಿ.ಎಂ. ಪಾರ್ವತಿ (ನಿವೃತ್ತ), ಪಟ್ಟಡ ಕುಶ. ಚಂಬಂಡ ಜನತ್, ಕಾಟುಮಣಿಯಂಡ ಉಮೇಶ್, ಬೇಪುಡಿಯಂಡ ಬಿದ್ದಪ್ಪ, ಚೀಯಬೆರೆ ಸತೀಶ್, ಪಟ್ಟಡ ಸುಜೀತ್ ಇದ್ದರು.