ದೇವಸಮುದ್ರ ಗ್ರಾಮದ ಎಲ್‌ಎಲ್‌ಸಿ ಕಾಲುವೆಗೆ ನಿರ್ಮಿಸಿದ ಸೇತುವೆ ಮೇಲೆ ಕುಣಿ ಬಿದ್ದಿರುವುದು. 
ಜಿಲ್ಲೆ

ದೇವಸಮುದ್ರ ಸೇತುವೆ ಮೇಲೆ ಬೊಂಗಾ

Gangavati - Desk - Veeresh S Ullagaddi

ಕಂಪ್ಲಿ: ತಾಲೂಕಿನ ದೇವಸಮುದ್ರ ಗ್ರಾಮಕ್ಕೆ ತೆರಳುವ ಎಲ್‌ಎಲ್‌ಸಿ ಕಾಲುವೆಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಮಧ್ಯ ಉದ್ದನೆಯ ಕುಣಿ ಬಿದ್ದಿದ್ದು, ವಾಹನಗಳ ಸಂಚಾರಕ್ಕೆ ಅಪಾಯ ತಂದೊಡ್ಡಿದೆ.


ಸೇತುವೆ ಶಿಥಿಲಗೊಂಡಿದ್ದರೂ ದುರಸ್ತಿಗೆ ಮುಂದಾಗುತ್ತಿಲ್ಲ. ಪಿಡಬ್ಯ್ಲುಡಿ, ನೀರಾವರಿ ಇಲಾಖೆ, ತುಂಗಭದ್ರಾ ಬೋರ್ಡ್‌ನವರು ಸೇತುವೆ ನಿರ್ಮಾಣ ಕಾಮಗಾರಿ ನಮ್ಮದಲ್ಲ ಎಂದು ದೂರುವುದರಿಂದಾಗಿ ಸೇತುವೆ ಅಕ್ಷರಶಃ ಅನಾಥವಾಗಿದೆ. ಸೇತುವೆ ಮೇಲೆ ಕುಣಿ ಬಿದ್ದಿರುವುದರಿಂದ ನಿತ್ಯ ನೂರಾರು ಬಂಡಿ, ಟ್ರ್ಯಾಕ್ಟರ್, ದ್ವಿಚಕ್ರ ವಾಹನಗಳು ಸಂಚಾರಕ್ಕೆ ಸಮಸ್ಯೆಯಾಗಿದೆ. ನೂತನ ಸೇತುವೆ ನಿರ್ಮಿಸಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.