ದೇವರಹಿಪ್ಪರಗಿಯಲ್ಲಿ ವೀರಭದ್ರೇಶ್ವರ ಕಲ್ಯಾಣೋತ್ಸವ, ಕಾರ್ತಿಕೋತ್ಸವ ನಿಮಿತ್ತ ದೀಪೋತ್ಸವ ನಡೆಯಿತು.  
ಜಿಲ್ಲೆ

ದೇವರಹಿಪ್ಪರಗಿ ವೀರಭದ್ರೇಶ್ವರ ಕಾರ್ತಿಕೋತ್ಸವ

ದೇವರಹಿಪ್ಪರಗಿ: ಶರಣರು, ಮಹಾತ್ಮರ ಪುರಾಣ ಪ್ರವಚನಗಳು ಮನುಷ್ಯನ ಜೀವನಕ್ಕೆ ದಾರಿದೀಪವಾಗಿವೆ ಎಂದು ಬಸವನಬಾಗೇವಾಡಿ ಒಡೆಯರ ಹಿರೇಮಠದ ಶಿವಪ್ರಕಾಶ ಶ್ರೀಗಳು ಹೇಳಿದರು.

ಪಟ್ಟಣದ ವೀರಭದ್ರೇಶ್ವರ ಕಾರ್ತಿಕೋತ್ಸವ ಸಮಿತಿಯಿಂದ ಸೋಮವಾರ ಜರುಗಿದ ಧರ್ಮಸಭೆ ಹಾಗೂ ಕಲಬುರ್ಗಿ ಶ್ರೀ ಶರಣ ಬಸವೇಶ್ವರ ಮಹಾಪುರಾಣ ಸಂಪನ್ನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶರಣ ಮಡಿವಾಳ ಮಾಚಿದೇವರ ತವರೂರಾದ ದೇವರಹಿಪ್ಪರಗಿಯಲ್ಲಿ ಇಂದಿಗೂ ಪುರಾಣ, ಪ್ರವಚನ ಸಾಂಗವಾಗಿ ಜರುಗುತ್ತಿರುವುದು ಭಕ್ತಿಯ ಪ್ರತೀಕವಾಗಿದೆ. ಪ್ರತಿಯೊಬ್ಬರೂ ಶರಣರು, ಮಹಾತ್ಮರ ಪವಾಡಪುರುಷರ ನಡೆ ನುಡಿಗಳನ್ನು ತಮ್ಮ ಜೀವನದಲ್ಲಿ ಅನುಸರಿಸಿ ಕ್ಷೇತ್ರದ ಘನತೆ ಹೆಚ್ಚಿಸಬೇಕೆಂದು ಹೇಳಿದರು.

ಆಲಮೇಲ ಹಿರೇಮಠದ ಚಂದ್ರಶೇಖರ ಶ್ರೀ ಸದಯ್ಯನಮಠದ ವೀರಗಂಗಾಧರ ಶ್ರೀಗಳು, ಗುಳೇದಗುಡ್ಡದ ರೇವಣಸಿದ್ಧೇಶ್ವರ ಶ್ರೀಗಳು, ಆವೋಗೇಶ್ವರ ತಪೋಧಾಮದ ಶ್ರೀಗಳು ಆಶೀರ್ವಚನ ನೀಡಿದರು.

ಗಾಯಕ ಶರಣಕುಮಾರ ಯಾಳಗಿ, ತಬಲಾವಾದಕ ನಾಗರಾಜ ಹುಣಸಿಗಿಡದ ಸಂಗೀತ ಕಾರ್ಯಕ್ರಮ ನೀಡಿದರು. ಕಲ್ಯಾಣೋತ್ಸವ ಹಾಗೂ ಕಾರ್ತಿಕೋತ್ಸವದ ನಿಮಿತ್ತ ಮಹಿಳೆಯರು ಮತ್ತು ಮಕ್ಕಳು ಮೊಂಬತ್ತಿ ಬೆಳಗಿಸಿದರು. 17 ದಿನ ಅನ್ನಪ್ರಸಾದ ವ್ಯವಸ್ಥೆ ಮಾಡಿದ ಮಹನೀಯರು ಹಾಗೂ ಸಮಿತಿಯ ಎಲ್ಲ ಸದಸ್ಯರನ್ನು ಸನ್ಮಾನಿಸಲಾಯಿತು. ತದನಂತರ ಮಹಾಪ್ರಸಾದ ಜರುಗಿತು.

ಕಾರ್ತಿಕೋತ್ಸವ ಸಮಿತಿ ಅಧ್ಯಕ್ಷ ಸಿ.ಕೆ.ಕುದರಿ, ಬಾಬುಗೌಡ ಪಾಟೀಲ (ಜಿಡ್ಡಿಮನಿ), ಪ್ರಭುದೇವ ಹಿರೇಮಠ, ಪಂಚಾಕ್ಷರಿ ಮಿಂಚನಾಳ, ಮಹಾರುದ್ರ ಕಕ್ಕಳಮೇಲಿ, ಯಲಗೂರೇಶ ದೇವೂರ, ದಾನು ಯರನಾಳ, ಸಂಗನಗೌಡ ಪಾಟೀಲ, ಶ್ರೀಶೈಲ ದೇಸಾಯಿ, ಜಗದೇವಪ್ಪ ಬಿರಾದಾರ, ಮಡಿವಾಳಪ್ಪ ಮಣೂರ, ರಮೇಶ ಮಶಾನವರ, ನಿಂಬೆಣ್ಣಪ್ಪ ದುತ್ತರಗಾಂವಿ, ಆನಂದ ಜಡಿಮಠ, ರವಿ ಯಾಳಗಿ, ವಿನೋದ ನಾಶಿಮಠ, ದಿನೇಶ ಪಾಟೀಲ, ಚನ್ನಯ್ಯ ಮಲ್ಲಿಕಾರ್ಜುನಮಠ, ಸೋಮು ಹಿರೇಮಠ, ವೀರೇಶ ಕುದರಿ, ಶ್ರೀಶೈಲ ಮಲ್ಲಿಕಾರ್ಜುನಮಠ, ಶಿವಯ್ಯ ವಸದ, ಕಾಶೀಪತಿ ಕುದರಿ, ವೀರಣ್ಣ ಮಣೂರ ಇತರರಿದ್ದರು.