ಬೆಂಗಳೂರು: ಶ್ರೀಪುರಂದರ ದಾಸರು ಮತ್ತು ಶ್ರೀ ಸದ್ಗುರು ತ್ಯಾಗರಾಜ ಸ್ವಾಮಿಗಳ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ಶ್ರೀ ಅನುಗ್ರಹ ಸಂಗೀತ ಮಹಾ ವಿದ್ಯಾಲಯವು ಆಯೋಜಿಸಿರು ಆಸಕ್ತ ಪುರುಷ ಮತ್ತು ಮಹಿಳೆಯರಿಗೆ ದೇವರನಾಮ ಕಲಿಕೆ ಶಿಬಿರಕ್ಕೆ ಸೋಮವಾರ ಚಾಲನೆ ದೊರೆಯಿತು.
25 ನೇ ವರ್ಷದ ಈ ಉಚಿತ ಶಿಬಿರವು ಜ. 20 ರಿಂದ ಫೆ. 13ರವರೆಗೆ ನಡೆಯಲಿದೆ. ಹನುಮಂತನಗರದ ಪಿಇಎಸ್ ಪದವಿ ಕಾಲೇಜು ಹಿಂಭಾಗದ ಸ್ವಾಮಿ ವಿವೇಕಾನಂದ ವಿದ್ಯಾ ಶಾಲೆಯಲ್ಲಿ ಪ್ರತಿದಿನ ಸಂಜೆ 5:30 ರಿಂದ 6:30ರ ವರೆಗೆ ಮತ್ತು ಕುಮಾರಸ್ವಾಮಿ ಬಡಾವಣೆ ನೀರಿನ ಟ್ಯಾಂಕ್ ಹತ್ತಿರದ ಗಣಪತಿ ದೇವಸ್ಥಾನದಲ್ಲಿ ಸಂಜೆ 4 ರಿಂದ 5ರವರೆಗೆ ಹಾಗೂ ಯಲಚೇನಹಳ್ಳಿ ಇಸ್ರೋ ಬಡಾವಣೆ ಸನ್ ರೈಸ್ ಲೇಔಟ್ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸಂಜೆ 4:30 ರಿಂದ 5 ರವರೆಗೆ ಶಿಬಿರ ನಡೆಯಲಿದೆ. ಆಸಕ್ತರು ಹೆಸರು ನೋಂದಣಿಗೆ 94485 33347 ಸಂಪರ್ಕಿಸಬಹುದು ಎಂದು ವಿದ್ಯಾಲಯದ ಪ್ರಾಚಾರ್ಯ ವಿದ್ವಾನ್ ಜೆ .ಎಸ್. ಶ್ರೀಕಂಠ ಭಟ್ ತಿಳಿಸಿದ್ದಾರೆ.