ರೋಣ ಪಟ್ಟಣದ  ತಾಲ್ಲೂಕು ಆಡಳಿತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಿಯಿಂದ ಜರುಗಿದ ಡಿ ದೇವರಾಜ ಅರಸು ಅವರ 108 ನೇ ಜನ್ಮದಿನಾಚರಣೆ  ಕಾರ್ಯಕ್ರಮದಲ್ಲಿ ವಸತಿ ನಿಲಯದಲ್ಲಿ ಡಿ ದೇವರಾಜ ಅರಸು ರವರ ಮೂರ್ತಿಯನ್ನು ಅನಾವರಣ ಮಾಡಲಾಯಿತು.ರವಿ ಗುಂಜಿಕರ. ಬಸವರಾಜ ಬಳ್ಳಾರಿ. ಬಸವರಾಜ ಅಂಗಡಿ. ಡಿ ಮೋಹನ್ ಚಿತ್ರದಲ್ಲಿದ್ದಾರೆ. 
ಜಿಲ್ಲೆ

ಹಿಂದುಳಿದ ವರ್ಗಗಳ ಇಲಾಖೆಗೆ ಪುರಸಭೆಯಿಂದ ಸಕಲ ರೀತಿಯ ಸಹಕಾರ ನೀಡುತ್ತೇವೆ: ಮಿಥುನ ಪಾಟೀಲ

Gadag - Shivanand Hiremath

ರೋಣ: ರೋಣ ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯ ನಿರ್ಮಾಣಕ್ಕೆ ಪುರಸಭೆಯಿಂದ ಬೇಕಾಗುವ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು ಎಂದು ಪುರಸಭೆ ಉಪಾಧ್ಯಕ್ಷ ಮಿಥುನ ಪಾಟೀಲ ಹೇಳಿದರು.

ಅವರು ರೋಣ ಪಟ್ಟಣದ ಗುರುಭವನದಲ್ಲಿ ತಾಲ್ಲೂಕು ಆಡಳಿತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಿಯಿಂದ ಜರುಗಿದ ಡಿ ದೇವರಾಜ ಅರಸು ಅವರ 108 ನೇ ಜನ್ಮದಿನಾಚರಣೆ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಬಡವರ ಪರ ಶೋಷನೆಗೆ ಒಳಗಾದ ಜನರನ್ನು ರಕ್ಷಿಸಬೇಕು ಎಂಬ ಪರಿಕಲ್ಪನೆ ಇತ್ತು ಅವರಿಗೆ ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಾಗ ಈ ಎಲ್ಲ ವರ್ಗದ ಜನರಿಗೆ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತಂದರು,ಹಿಂದುಳಿದ ಆಯೋಗವನ್ನು ಸ್ಥಾಪಿಸಿದರು ಭೂ ಸುಧಾರಣೆ ಕಾಯಿದೆ ಜಾರಿಗೆ ತಂದರು,ಇಂತಹ ಧಿಮಂತ ನಾಯಕರು ನಮ್ಮ ರಾಜ್ಯಕ್ಕೆ ಸಿಕ್ಕಿದ್ದರು ಎಂಬುದು ನಮಗೆ ಹೆಮ್ಮೆಯ ವಿಷಯ,ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆಯಬೇಕು ಅಂದಾಗ ದೇಶದ ಅಭಿವೃದ್ಧಿ ಸಾದ್ಯ ಇದಕ್ಕೆ ದೇವರಾಜ ಅರಸು ರವರ ಕೊಡುಗೆ ಅಪಾರ,ವಸತಿ ನಿಲಯಗಳಲ್ಲಿ ನೀಡುವ ಸವಲತ್ತುಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು,ಈಗಾಗಲೇ ಪುರಸಭೆ ವತಿಯಿಂದ ವಸತಿ ನಿಲಯ ನಿರ್ಮಾಣಗಳಿಗೆ ಜಾಗಕ್ಕೆ ಅನುಮತಿ ಸಹ ನೀಡಲಾಗಿದೆ,ವಸತಿ ನಿಲಯ ನಿರ್ಮಾಣಕ್ಕೆ ರೋಣ ಪಟ್ಟಣದಲ್ಲಿ ಜಾಗಗಳನ್ನು ನೀಡಲು ಸಹ ಕ್ರಮ ಕೈಗೊಳ್ಳಲಾಗುವುದು ಹಿಂದುಳಿದ ವರ್ಗಗಳ ಇಲಾಖೆಗೆ ರೋಣ ಪುರಸಭೆ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ರವಿ ಗುಂಜಿಕರ  ಮಾತನಾಡಿ ವಸತಿ ನಿಲಯಗಳಲ್ಲಿ ಕೇವಲ ಊಟ ವಸತಿ ಅಲ್ಲ ಶೈಕ್ಷಣಿಕ ಪ್ರಗತಿಗಾಗಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ.ಪಠ್ಯದ ಜೊತೆ ಸಾಂಸ್ಕೃತಿಕ ಚಟುವಟಿಕೆ.ವ್ಯಕ್ತಿತ್ವ ವಿಕಸನ,ಕರಾಟೆ ಆಟದ ಸ್ಪರ್ಧೆ,ಹೀಗೆ ಮಕ್ಕಳಿಗೆ ವಸತಿ ನಿಲಯಗಳಲ್ಲಿ ಅನೇಕ ಸವಲತ್ತುಗಳನ್ನು ನೀಡಿಲಾಗುತ್ತಿದೆ ಎಂದರು.ಇದೇಸಂದರ್ಭದಲ್ಲಿ ವಸತಿ ನಿಲಯಗಳಲ್ಲಿ ಅಬ್ಯಾಸ ಮಾಡಿ ಉತ್ತಮ ಪಲಿತಾಂಶ ಪಡೆದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮಕ್ಕೂ ಮುನ್ನ ಡಿ ದೇವರಾಜ ಅರಸುರವರ ಭಾವಚಿತ್ರ ಮೆರವಣಿಗೆ ಹಮ್ಮಿಕೊಳ್ಳಲಾಯಿತು ಈ ಕಾರ್ಯಕ್ರಮಕ್ಕೆ ಶಾಸಕ ಜಿ ಎಸ್ ಪಾಟೀಲ ಚಾಲನೆ ನೀಡಿದರು, ಇದೇ ಸಂದರ್ಭದಲ್ಲಿ ವಸತಿ ನಿಲಯದಲ್ಲಿ ಡಿ ದೇವರಾಜ ಅರಸು ರವರ ಮೂರ್ತಿಯನ್ನು ಅನಾವರಣ ಮಾಡಲಾಯಿತು, ಕಾರ್ಯಕ್ರಮದಲ್ಲಿ ಗಜೇಂದ್ರಗಡ ತಾಲ್ಲೂಕು ಪಂಚಾಯತಿ ಇಒ ಡಿ ಮೋಹನ.ಹಿಂದುಳಿದ ವರ್ಗಗಳ ತಾಲ್ಲೂಕು ಕಲ್ಯಾಣಾಧಿಕಾರಿ ಬಸವರಾಜ ಬಳ್ಳಾರಿ,ಅಕ್ಷರದಾಸೋಹ ಇಲಾಖೆ ಅಧಿಕಾರಿ ಬಸವರಾಜ ಅಂಗಡಿ,ಡಿ ಹೆಚ್ ವಸ್ತಾದ,ಸಿ ಬಿ ಕಲಕೇರಿ,ಶಿವಪುತ್ರಪ್ಪ ಕುನಸಗಿ,ಎಮ್ ಎಸ್ ಗೋಡಿ,ಪ್ರಭಾಕರ ಛಲವಾದಿ,ಜಯದೇವಿ ಗೌಡರ,ಮಂಜುನಾಥ ಅಂಬಿಗೇರ,ಹನಮಂತ ಯರಗೇರಿ,ಅಂದಾನಪ್ಪ ಬಳಿಗೇರ,ಸೇರಿದಂತೆ ಅನೇಕರಿದ್ದರು.