ಜಿಲ್ಲೆ

ತಳಸಮುದಾಯದವರ ಕಷ್ಟ ಅರಿತಿದ್ದ ಅರಸು: ಜಯನ್​ ಮಲ್ಪೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ಸಾಮಾಜಿಕ ಪರಿವರ್ತನೆಯ ನಾಯಕ, ಹಿಂದುಳಿದ ಜನರಿಗೆ ಮತ್ತು ದಲಿತರಿಗೆ ಬೆಳಕು ತೋರಿದ ಕರುಣಾಳು ಡಿ.ದೇವರಾಜ ಅರಸು ತಳಸಮುದಾಯದವರ ಕಷ್ಟವನ್ನು ಅರಿತು ಪ್ರಜಾಪ್ರಭುತ್ವ ಮಾರ್ಗದಲ್ಲಿ ಪರಿಹಾರ ಕೈಗೊಂಡವರು ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್​ ಮಲ್ಪೆ ಹೇಳಿದ್ದಾರೆ.

ಭಾನುವಾರ ಆದಿಉಡುಪಿ ಅಂಬೇಡ್ಕರ್​ ಭವನದಲ್ಲಿ ಜಿಲ್ಲಾ ಅಂಬೇಡ್ಕರ್​ ಯುವಸೇನೆ ಆಯೋಜಿಸಿದ ಡಿ.ದೇವರಾಜ ಅರಸು ಅವರ 108ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಉಳುವವನೇ ಹೊಲದೊಡೆಯ ಎಂಬ ಕಾನೂನು ತಂದು ಗೇಣಿದಾರರಿಗೆ ಬದುಕು ನೀಡಿದ, ಮಲ ಹೊರುವ ಪದ್ಧತಿಯನ್ನು ನಿಷೇಧಿಸುವ ಮೂಲಕ ನಾಡಿನ ಬಡವರ,ಶೋಷಿತರ,ದಲಿತರ ತಬ್ಬಲಿ ಜಾತಿಗಳ ಎಂದರು.

ಮುಖ್ಯಅತಿಥಿಗಳಾದ ಬುದ್ಧ ಟ್ರಸ್ಟ್​ನ ಶಂಭು ಮಾಸ್ತರ್​ ಮಾತನಾಡಿ, ದಲಿತ ಹಾಗೂ ಹಿಂದುಳಿದ ವರ್ಗಕ್ಕೆ ಸಮಾಜಿಕ ಸಮಾನತೆಯ ಸವಿ ಉಣಬಡಿಸಿದ್ದ ದೇವರಾಜ ಅರಸು ಅವರ ಸಾಧನೆಯನ್ನು ಈ ಸಮಾಜ ಎಂದೂ ಮರೆಯಬಾರದು ಎಂದರು.

ಭೋವಿ ಸಮಾಜದ ಅಧ್ಯಕ್ಷ ಶ್ರೀನಿವಾಸ ಕಾರ್ಕಳ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಅಂಬೇಡ್ಕರ್​ ಯುಸೇನೆಯ ಜಿಲ್ಲಾಧ್ಯಕ್ಷ ಹರೀಶ್​ ಸಾಲ್ಯಾನ್​ ವಹಿಸಿದ್ದರು.

ಈ ಸಂದರ್ಭದಲ್ಲಿ ದಲಿತ ಮುಖಂಡ ಗಣೇಶ್​ ನೆರ್ಗಿ,ಸಂತೋಷ್​ ಕಪ್ಪೆಟ್ಟು,ಕೆ.ಪಿ.ಈಶ್ವರ್​ ಕುರ್ಕಲ್​,ಆನಂದ ಎಸ್​ಬಿಐ,ದಿನೇಶ್​ ಜವನರೆಕಟ್ಟೆ ಅರಸು ಕುರಿತು ಮಾತನಾಡಿದರು.

ಅಂಬೇಡ್ಕರ್​ ಯುಸೇನೆಯ,ಉಡುಪಿ ಭಾರತೀಯ ಬೌದ್ಧ ಮಹಾಸಭಾದ ಹಾಗೂ ಭೋವಿ ಸಮಾಜ ಸಂಘದ ಮುಖಂಡರಾದ, ಭಗವಾನ್​ ಮಲ್ಪೆ,ಮಹೇಶ್​ ಚೆಂಡ್ಕಳ,ನವೀನ್​ ಬನ್ನಂಜೆ,ವಸಂತ ಅಂಬಲಪಾಡಿ,ಸುವಿಜ್​ ಮೂಡಬೆಟ್ಟು,ರವೀಂದ್ರ ಬಂಟಕಲ್ಲು,ಪುಷ್ಪಕರ್​ ಗೋಪಾಲಕೃಷ್ಣಕುಂದಾಪುರ,ರಮೇಶ್​,ಸುಶೀಲ್​ ಕುಮಾರ್​, ರಾಜ್​ಕುಮಾರ್​ ಪೆರ್ಣಂಕಿಲ.ಆನಂದ ಕುಂಜರ್​ಗಿರಿ ಮುಂತಾದವರು ಉಪಸ್ಥಿತರಿದ್ದರು. ಪ್ರಸಾದ್​ ಮಲ್ಪೆ ಸ್ವಾಗತಿಸಿ, ಸುಕೇಶ್​ ಪುತ್ತೂರು ವಂದಿಸಿದರು, ಅಶೋಕ್​ ನಿಟ್ಟೂರು ಕಾರ್ಯಕ್ರಮ ನಿರೂಪಿಸಿದರು.