ತುಮಕೂರು : ಮಾಜಿ ಸಿಎಂ ಡಿ.ದೇವರಾಜು ಅರಸು ಅವರು ಜಾರಿಗೆ ತಂದ ’ಉಳುವವನೇ ಭೂಮಿಯ ಒಡೆಯ ಭೂ ಸುಧಾರಣಾ ಕಾಯ್ದೆ’ ದೀನ ದಲಿತ, ಹಿಂದುಳಿದ ವರ್ಗಗಳಿಗೆ ವರದಾನವಾಗಿದೆ ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಭಿಪ್ರಾಯಪಟ್ಟರು.
ಜಿಲ್ಲಾಕಾರಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ದಿವಂಗತ ಡಿ.ದೇವರಾಜ ಅರಸು ಅವರ 106ನೇ ಜಯಂತಿಯಲ್ಲಿ ದೇವರಾಜು ಅರಸು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಅರಸು ನಮ್ಮ ನಾಡು ಕಂಡ ಅಪರೂಪದ ಸಾಮಾಜಿಕ ಹರಿಕಾರ, ೀಮಂತ ರಾಜಕಾರಣಿ. ಅವರು ಮುಖ್ಯಮಂತ್ರಿಯಾಗಿದ್ದ ಅವಯಲ್ಲಿ ಸಮಾನತೆಯ ಸಮಾಜ ನಿರ್ವಾಣಕ್ಕೆ ಶ್ರಮಿಸಿದರು. ಬಡವರ ಧ್ವನಿಯಾಗಿ ಭೂ ಸುಧರಣಾ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಎಲ್ಲ ವರ್ಗದ ಜನರಿಗೆ ಅಚ್ಚು ಮೆಚ್ಚಿನ ರಾಜಕಾರಣಿಯಾಗಿದ್ದರು ಎಂದು ಸ್ಮರಿಸಿದರು.
ರಾಜಕಾರಣಿಯಾಗಿ ನಾಡಿಗೆ ಉತ್ತಮ ಕೊಡುಗೆ ನೀಡಿರುವ ದೇವರಾಜು ಅರಸು ಅವರ ಪುಣ್ಯಸ್ಮರಣೆ ವಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ, ಸಾವಿನ ನಂತರವೂ ಜನರು ಸ್ಮರಿಸುವಂತಹ ಕೆಲಸ ಮಾಡಿರುವ ಕೆಲವೇ ರಾಜಕಾರಣಿಗಳನ್ನು ಅರಸು ಕೂಡ ಒಬ್ಬರು. ಅವರ ಸೇವಾವಯಲ್ಲಿ ದಿನಗಳು ಎಲ್ಲ ರಾಜಕಾರಣಿಗಳಿಗೆ ಮಾದರಿ ಎಂದರು.
ಈ ಸಂದರ್ಭದಲ್ಲಿ ಜಿಲ್ಲೆಯ ಹಿಂದುಳಿದ ವರ್ಗಗಳ ವಸತಿ ನಿಯಲದ ವಿದ್ಯಾರ್ಥಿಗಳಿಗಾಗಿ ಡಿ.ದೇವರಾಜ ಅರಸು ಅವರು ಸಾಧನೆ, ಜೀವನ ವೌಲ್ಯಗಳ ಕುರಿತು ಏರ್ಪಡಿಸಿದ್ದ ಭಾಷಣ ಸರ್ಧೆಯಲ್ಲಿ ವಿಜೇತರಾದ ಕಡೂರು ತಾಲೂಕಿನ ಈಜಿಹಳ್ಳಿಯ ಎಂ.ಆರ್.ಶರತ್, ತುಮಕೂರು ತಾಲೂಕಿನ ಡಿ.ಶೃತಿ , ಡಿ.ಸಿ.ಕಾವ್ಯಾ, ಮೇಬಾಯಿ ಅವರಿಗೆ ಬಹುಮಾನ ವಿತರಿಸಿ ಸನ್ಮಾನಿಸಿ ಗೌರವಿಸಲಾಯಿತು.
ಮಹಾನಗರ ಪಾಲಿಕೆ ಮೇಯರ್ ಕೃಷ್ಣಪ್ಪ, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಪೊಲೀಸ್ ವರಿಷ್ಠಾಕಾರಿ ರಾಹುಲ್ ಕುಮಾರ್ ಶಹಾಪುರವಾಡ್, ಬಿಸಿಎಂ ಇಲಾಖೆ ಜಿಲ್ಲಾ ಅಕಾರಿ ಸುಬ್ರನಾಯ್ಕ, ಭಾನುಮತಿ, ಸವಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ ಮತ್ತಿತರರು ಇದ್ದರು.
ಸಮಸವಾಜದ ಕನಸು ಕಂಡವರು : ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಸಮಸಮಾಜ ನಿರ್ವಾಣ ಕನಸು ಕಂಡವರು, ಜೀತ ಹಾಗೂ ಮಲ ಹೊರುವ ಪದ್ಧತಿ ನಿರ್ಮೂಲನೆ ಮಾಡಿದವರು. ಹಿಂದುಳಿದ ಸಮುದಾಯಗಳಿಗೆ ವಿದ್ಯಾರ್ಥಿನಿಲಯಗಳ ಸ್ಥಾಪನೆ, ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ, ಅರಣ್ಯ ಉಳಿಸುವ ಗ್ರೀನ್ ಬೆಲ್ಟ್ ಕಾಯ್ದೆ ಸೇರಿದಂತೆ ಅನೇಕ ಜನಪರ ಯೋಜನೆ ಜಾರಿಗೆ ತಂದು ನಾಡಿನ ಸುಭಿಕ್ಷೆಗೆ ದುಡಿದ ಅವರ ಹಾದಿಯಲ್ಲೆ ನಾವೆಲ್ಲರೂ ನಡೆಯಬೇಕಾಗಿದೆ ಎಂದು ಜಿಲ್ಲಾಕಾರಿ ವೈ.ಎಸ್.ಪಾಟೀಲ ಹೇಳಿದರು.