ಜಿಲ್ಲೆ

ದೇವರಾಜ ಎಸಿಪಿ ಕಚೇರಿ ನೌಕರ ಪ್ರದೀಪ್ ಅಮಾನತು

ಮೈಸೂರು: ಮಾದಕ ವಸ್ತು ತಪಾಸಣೆ ವೇಳೆ ಜೂಜಾಟದ ಮಾಹಿತಿ ತಿಳಿದಿದ್ದರೂ ವಿಷಯ ಮರೆಮಾಚಿದ ಆರೋಪದ ಮೇಲೆ ದೇವರಾಜ ಎಸಿಪಿ ಕಚೇರಿಯ ನೌಕರ ಪ್ರದೀಪ್ ಅವರನ್ನು ಅಮಾನತುಪಡಿಸಿ ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.

ಮಾದಕ ವಸ್ತುಗಳ ವಿರುದ್ಧ ಸಮರ ಸಾರಿರುವ ಮೈಸೂರು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ವೇಳೆ ಉದಯಗಿರಿ ಸೇರಿದಂತೆ ವಿವಿಧ ಭಾಗದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಜೂಜಾಟದ ಅಡ್ಡೆ ಪತ್ತೆಯಾಗಿದೆ. ಅಲ್ಲಿ ವಿಚಾರಣೆ ನಡೆಸಿದ ಸಮಯದಲ್ಲಿ ಎಸಿಪಿ ತನಿಖಾ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರದೀಪ್ ಅವರಿಗೆ ಮಾಹಿತಿ ತಿಳಿದಿತ್ತು ಎನ್ನಲಾಗಿದೆ. ಈ ವರದಿ ಆಧರಿಸಿ ಅಮಾನತು ಆದೇಶ ಹೊರಡಿಸಲಾಗಿದೆ.