ದೇವರಹಿಪ್ಪರಗಿ, ಕನ್ನಡ ಸಾಹಿತ್ಯ ಸಮ್ಮೇಳನ, ದೇವರಹಿಪ್ಪರಗಿ, ಬಿ.ಎಲ್.ಡಿ.ಇ ಸಂಸ್ಥೆ, ಮಡಿವಾಳ ಮಾಚಿದೇವರು, ಮೊಹರೆ ಹಣಮಂತ್ರಾಯ, ನಟಕೇಸರಿ ಸಿದ್ರಾಮಪ್ಪ ಹಂದಿಗನೂರ, ಕೇಶಿರಾಜ, Devarahipparagi, Kannada Sahitya Sammelana, Devarahipparagi, BLDE Institute, Madiwala Machidevaru, Mohare Hanamantraya, Natakesari Sidramappa Handiganur, Keshiraja,
ದೇವರಹಿಪ್ಪರಗಿ: ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಜ.3 ರಂದು ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ಹಳೆಯ ಪ್ರೌಢಶಾಲಾ ಹಾಗೂ ಕಾಲೇಜು ಆವರಣದಲ್ಲಿ ಬೆಳಗ್ಗೆ 8ಕ್ಕೆ ಧ್ವಜಾರೋಹಣದೊಂದಿಗೆ ಆರಂಭಗೊಳ್ಳಲಿದೆ.
ಸಮ್ಮೇಳನದ ಪ್ರಧಾನ ವೇದಿಕೆಗೆ ಮಡಿವಾಳ ಮಾಚಿದೇವರು, ಮುಖ್ಯ ಮಹಾದ್ವಾರಕ್ಕೆ ಮೊಹರೆ ಹಣಮಂತ್ರಾಯ, ದಾಸೋಹಮನೆಗೆ ನಟಕೇಸರಿ ಸಿದ್ರಾಮಪ್ಪ ಹಂದಿಗನೂರ ಹಾಗೂ ಪುಸ್ತಕ ಮಳಿಗೆಗೆ ಕೇಶಿರಾಜ ಎಂದು ನಾಮಕರಣ ಮಾಡಲಾಗಿದೆ.
ಬೆಳಗ್ಗೆ 8.30ಕ್ಕೆ ಕಲಾ ತಂಡಗಳೊಂದಿಗೆ ಮಡಿವಾಳ ಮಾಚಿದೇವರ ದೇವಸ್ಥಾನದಿಂದ ಬಿ.ಎಲ್.ಡಿ.ಇ ಸಂಸ್ಥೆಯ ಆವರಣದವರೆಗೆ ಸಮ್ಮೇಳಾನಾಧ್ಯಕ್ಷ, ಸಾಹಿತಿ ಸಂಗಮೇಶ ಕೆರೆಪ್ಪಗೋಳ ಅವರ ಮೆರವಣಿಗೆ ಜರುಗಲಿದೆ. 10 ಗಂಟೆಗೆ ಮಡಿವಾಳ ಮಾಚಿದೇವರ ಮುಖ್ಯ ವೇದಿಕೆಯಲ್ಲಿ ಸಮ್ಮೇಳನದ ಉದ್ಘಾಟನೆ ಜರುಗಲಿದೆ. ನಂತರ ಸುವರ್ಣ ಕರ್ನಾಟಕ ಸಂಭ್ರಮ 50ರ ನಿಮಿತ್ತ ದೇವರಹಿಪ್ಪರಗಿ ತಾಲೂಕು ಸಾಹಿತ್ಯ ಪರಿಷತ್‌ನಿಂದ ಗೌರವ ಸನ್ಮಾನ ಜರುಗಲಿದೆ.
ಮಧ್ಯಾಹ್ನ 12.30ಕ್ಕೆ ಜರುಗುವ ಶರಣ ಗೋಷ್ಠಿಯಲ್ಲಿ ಮಡಿವಾಳ ಮಾಚಿದೇವರ ಕುರಿತು ಶ್ರೀಧರ ಆಸಂಗಿಹಾಳ ಹಾಗೂ ಮೊಹರೆ ಹಣಮಂತ್ರಾಯರ ಜೀವನ ಚರಿತ್ರೆಯ ಕುರಿತು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎನ್.ಬಸವರೆಡ್ಡಿ ಉಪನ್ಯಾಸ ನೀಡಲಿದಾರೆ. ನಂತರ 2.30 ಕ್ಕೆ ಕವಿಗೋಷ್ಠಿ ಆರಂಭಗೊಳ್ಳಲಿದ್ದು, 28 ಕ್ಕೂ ಹೆಚ್ಚು ಕವನಗಳ ವಾಚನ ನಡೆಯಲಿದೆ.
ಸಂಜೆ 4.30ಕ್ಕೆ ಜರುಗುವ 3ನೇ ಗೋಷ್ಠಿಯಲ್ಲಿ ಜಾನಪದ ಸಂಭ್ರಮ ಮತ್ತು ಬಂಡಾಯ ಸಾಹಿತ್ಯ ಕುರಿತು ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಹಾಗೂ ಸಾಹಿತಿ ಅಶೋಕ ಹಂಚಲಿ ಅವರಿಂದ ಉಪನ್ಯಾಸ ಜರುಗಲಿದೆ. ನಂತರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವ ಪದಾಧಿಕಾರಿಗಳ ಬಹಿರಂಗ ಅಧಿವೇಶನ ನಡೆಯಲಿದೆ.
ಸಂಜೆ 7.30ಕ್ಕೆ ಸಮಾರೋಪ ಸಮಾರಂಭ, 8.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಸಮ್ಮೇಳನದ ಎಲ್ಲ ಗೋಷ್ಠಿಗಳು ಹಾಗೂ ಸಮಗ್ರ ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ತಾಲೂಕು ಕಸಾಪ ಅಧ್ಯಕ್ಷ ಜಿ.ಪಿ.ಬಿರಾದಾರ ಸಹಿತ ತಾಲೂಕಿನ ವಿವಿಧ ಮಠಗಳ ಮಠಾಧೀಶರು, ರಾಜಕೀಯ ಧುರೀಣರು, ಯುವಸಾಹಿತಿಗಳು, ವೈದ್ಯರು, ತಾಲೂಕಿನ ವಿವಿಧ ವಿದ್ಯಾಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕ ಸಮುದಾಯ, ಮಾಧ್ಯಮ ಮಿತ್ರರು, ಉದ್ಯಮಿಗಳು, ತಾಲೂಕಿನ ವಿವಿಧ ಎಲ್ಲ ಇಲಾಖೆಗಳ ಸಾಹಿತ್ಯಾಸಕ್ತರು ಭಾಗವಹಿಸಲಿದ್ದಾರೆ ಎಂದು ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಕಟಣೆ ತಿಳಿಸಿದೆ.