ಇಳಕಲ್ಲದ ಶಂಕರಿ ರಾಮಲಿಂಗ ದೇವಸ್ಥಾನದಲ್ಲಿ ದೇವಲ ಮಹರ್ಷಿ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಸಾಧಕರ ಸತ್ಕಾರ ಸಮಾರಂಭವನ್ನು ಶಾಸಕ ವಿಜಯಾನಂದ ಕಾಶಪ್ಪನವರ ಉದ್ಘಾಟಿಸಿದರು. ಹಂಪಿ ಹೇಮಕೂಟ ಪೀಠದ ಜಗದ್ಗುರು ದಯಾನಂದಪುರಿ, ಮುನಿಸ್ವಾಮಿ ದೇವಾಂಗಮಠ, ಜಿಲ್ಲಾ ದೇವಾಂಗ ಸಮಾಜದ ಅಧ್ಯಕ್ಷ ಸತೀಶ ಸಪ್ಪರದ, ನಗರಸಭೆ ಸದಸ್ಯ ಅಮೃತ ಬಿಜ್ಜಳ,ಬಾಬು ಸಜ್ಜಿ, ಪಂಪಣ್ಣ ಸಪ್ಪಂಡಿ, ಲಲಿತಾಬಾಯಿ ಸಪ್ಪರದ, ಮಂಜುನಾಥ ಸಪ್ಪರದ ಇದ್ದರು. 
ಜಿಲ್ಲೆ

ದೇವಾಂಗ ಕುಲ ಬಾಂಧವರು ಶ್ರಮಜೀವಿಗಳು

ಇಳಕಲ್ಲ(ಗ್ರಾ): ನಿತ್ಯ ಕಾಯಕ ಮಾಡಿ ಜೀವನ ನಡೆಸುವ ದೇವಾಂಗ ಕುಲ ಬಾಂಧವರು ಶ್ರಮಜೀವಿಗಳು ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಇಲ್ಲಿನ ಶಂಕರಿ ರಾಮಲಿಂಗ ದೇವಸ್ಥಾನದಲ್ಲಿ ದೇವಲ ಮಹರ್ಷಿ ಜಯಂತಿ ಆಚರಣೆ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಸಾಧಕರ ಸತ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸೀರೆಗಳನ್ನು ನೇಯ್ದು ಅದರಿಂದಲೇ ಹೊಟ್ಟೆ ತುಂಬಿಸಿಕೊಳ್ಳುವ ನೇಕಾರರು ಈಗ ಬೇರೆ ಬೇರೆ ಉದ್ಯೋಗಗಳತ್ತ ವಾಲಿದರೂ ತಮ್ಮ ಕುಲಕಸುಬನ್ನು ಮರೆತಿಲ್ಲ. ನೇಕಾರರ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದರು.

ಸಮಾಜದ ಅಧ್ಯಕ್ಷ ಅಶೋಕ ಬಿಜ್ಜಳ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಕಟ್ಟೆಯ ಸಂಚಾಲಕ ಗುರುದಾಸ ನಾಗಲೋಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹಂಪಿ ಹೇಮಕೂಟ ಪೀಠದ ಜಗದ್ಗುರು ದಯಾನಂದಪುರಿ, ಇಳಕಲ್ಲದ ಮುನಿಸ್ವಾಮಿ ದೇವಾಂಗಮಠ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸುವರ್ಣ ಕರ್ನಾಟಕ ಪ್ರಶಸ್ತಿ ವಿಜೇತ ನೀಲಕಂಠ ಕಾಳಗಿ, ಸುನಂದಾ ಕಂದಗಲ್ಲ, ಸಿತಿಮಾ ವಜ್ಜಲ ಅವರನ್ನು ಸತ್ಕರಿಸಿ ಗೌರವಿಸಲಾಯಿತು.

ಜಿಲ್ಲಾ ದೇವಾಂಗ ಸಮಾಜದ ಅಧ್ಯಕ್ಷ ಸತೀಶ ಸಪ್ಪರದ, ನಗರಸಭೆ ಸದಸ್ಯ ಅಮೃತ ಬಿಜ್ಜಳ, ಬಾಬು ಸಜ್ಜಿ, ಪಂಪಣ್ಣ ಸಪ್ಪಂಡಿ, ಲಲಿತಾಬಾಯಿ ಸಪ್ಪರದ, ಮಂಜುನಾಥ ಸಪ್ಪರದ ಇತರರಿದ್ದರು.