ಹುಬ್ಬಳ್ಳಿ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಧಾರವಾಡ ಜಿಲ್ಲಾ ದೇವಾಂಗ ಸೇವಾ ಸಂಘವು ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲು ಉದ್ದೇಶಿಸಿದ್ದು, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಶೇ. 90ಕ್ಕೂ ಹೆಚ್ಚು ಅಂಕ ಗಳಿಸಿದವರು ಪುರಸ್ಕಾರಕ್ಕೆ ಅರ್ಹರು. ಪಿಯುಸಿಯಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದವರಿಗೆ ಪ್ರತ್ಯೇಕ ಪುರಸ್ಕಾರ ನೀಡಲಾಗುತ್ತದೆ.
ಜು. 21ರಂದು ನಗರ ಸವಾಯಿ ಗಂಧರ್ವ ಸಭಾಂಗಣದಲ್ಲಿ ಜರುಗಲಿರುವ ಗುರುಪೂರ್ಣಿಮೆ ಹಾಗೂ ಸಮಾಜದ ಜಗದ್ಗುರುಗಳಿಗೆ ಸಿಂಹಾಸನ ಸಮರ್ಪಣೆ ಕಾರ್ಯಕ್ರಮದಲ್ಲಿ ಪುರಸ್ಕಾರ ವಿತರಿಸಲಾಗುತ್ತದೆ.
ಸಮಾಜದ ಮಕ್ಕಳಿಗೆ ಜದ್ಗುರುಗಳಿಂದ ಅಕ್ಷರ ಅಭ್ಯಾಸ ವಿಶೇಷ ಕಾರ್ಯಕ್ರಮ ನಡೆಯುವುದು. ಈ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಲು ಕೋರಲಾಗಿದೆ.
ಆಸಕ್ತರು, ತುಕಾರಾಮ ಅಂಕದ-, ಮನೆ ನಂ. ಸಿ. 12, ಮಲ್ಲಾಡಿ ಲೇಔಟ್, ಪ್ರಶಾಂತ ನಗರ, ಹೆಗ್ಗೇರಿ, ಮುರುಡೇಶ್ವರ ಫ್ಯಾಕ್ಟರಿ ಹಿಂಭಾಗ ಹುಬ್ಬಳ್ಳಿ ಇಲ್ಲಿಗೆ ಸಂಪರ್ಕಿಸಬಹುದು.