ಜಿಲ್ಲೆ

ದೇವಾಂಗ ಸಮಾಜದಿಂದ ಪ್ರತಿಭಾ ಪುರಸ್ಕಾರ

Dharwada - Basavaraj Idli

ಹುಬ್ಬಳ್ಳಿ: ಧಾರವಾಡ ದೇವಾಂಗ ಸಮಾಜ ಬಾಂಧವರಿಂದ ಧಾರವಾಡದ ಹಳಿಯಾಳ ರಸ್ತೆ ರವೀಂದ್ರ ನಗರದ ದೇವಾಂಗ ವಿದ್ಯಾರ್ಥಿ ನಿಲಯ ಹಾಗೂ ಎನ್.ಆರ್. ಹುಲಮನಿ ಸಭಾಭವನದಲ್ಲಿ ಆ. 26ರಂದು ಸಂಜೆ 5.-30ಕ್ಕೆ "ಪ್ರತಿಭಾ ಪುರಸ್ಕಾರ ಹಾಗೂ 75 ವಸಂತ ಪೂರೈಸಿದ ಹಿರಿಯರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ.

ದೇವಾಂಗ ಸಮಾಜದವರಾದ ಮೇಯರ್ ವೀಣಾ ಬರದ್ವಾಡ ಅವರು ಕಾರ್ಯಕ್ರಮ ಉದ್ಘಾಟಿಸುವರು. ಖ್ಯಾತ ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಸಮಾಜದ ವಿದ್ಯಾಥಿರ್ಗಳಿಗೆ ಪುರಸ್ಕಾರ ನೀಡಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಐವರು ಹಿರಿಯರಿಗೆ ಸನ್ಮಾನಿಸಲಾಗುವುದು.

ಮಹಿಳಾ ಮಂಡಳಿ ವತಿಯಿಂದ ಹೆಣ್ಣುಮಕ್ಕಳಿಗೆ ವಿವಿಧ ಮನರಂಜನಾ ಸ್ಪರ್ಧೆಗಳು ನಡೆಯಲಿವೆ. ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.

ಸಮಾಜದ ನೂತನ ಅಧ್ಯಕ್ಷ ವಿನೋದ ಹುಲಮನಿ ಅಧ್ಯಕ್ಷತೆ ವಹಿಸುವರು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಜ್ಞಾನೇಶ್ ಚೋಳಿನ್ ಅವರು ಕೋರಿದ್ದಾರೆ.