ವಿಜಯವಾಣಿ ಸುದ್ದಿಜಾಲ ಕಲಬುರಗಿ
ಚಿತ್ತಾಪುರ ತಾಲೂಕಿನ ಕಲಗುರ್ತಿ ಗ್ರಾಮದ ದೇವಾನಂದ ರಾಮಚಂದ್ರ ಸಾವಿನ ಪ್ರಕರಣದ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ ಡಾ.ಸಾಬಣ್ಣ ತಳವಾರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಸರ್ಕಾರಕ್ಕೆ ಒತ್ತಾಯಿಸಿದ ಅವರು, ಮುಂದೆ ಕಾರು ನಿಲ್ಲಿಸಿದ ವಿಷಯಕ್ಕೆ ಯುವಕ ಹಾಗು ದೇವಾನಂದ ಇಬ್ಬರ ನಡುವೆ ಜಗಳವಾಗಿತ್ತು. ಇದಕ್ಕೆ ಸ್ಥಳೀಯ ಮುಖಂಡರೊಬ್ಬರು ನಿಮ್ಮ ಮನೆಯ ಮುಂದೆ ಕಾರನ್ನು ನಿಲ್ಲಿಸಿದರೆ ಏನಾಯಿತು ಎಂದು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಹೊಡೆದ, ಬೆದರಿಸಿದರು. ಮಾಡಬೂಳ ಪೊಲೀಸರು ದೇವಾನಂದರನ್ನು ಠಾಣೆಯಲ್ಲಿ ಸಂಜೆ ವರೆಗೆ ಕೂಡಿಸಿ ಮನೆಗೆ ಕಳಿಸಿದ್ದರು ಎಂದು ಆರೋಪಿಸಿದರು. ರಾಜಕೀಯ ಮುಖಂಡರ ದಬ್ಬಾಳಿಕ, ಪೊಲೀಸರು ಹೊಡೆಯುವದು, ಬೆದರಿಕೆ ಹಾಕಿರುವದರಿಂದ ದೇವಾನಂದ ಮಾನಸಿಕ ಹಿಂಸೆಗೆ ಒಳಗಾಗಿ ತುಂಬಾ ಭಯಗೊಂಡು, ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದೇವಾನಂದ ವಿರುದ್ಧ ಯಾವ ಪ್ರಕರಣವೂ ಇಲ್ಲ. ಯಾವ ಪ್ರಕರಣದ ಆರೋಪಿಯಾಗದೆ ವಿಷ ಕುಡಿದು ಆತ್ಮ ಹತ್ಯೆ ಮಾಡಿಕೊಳ್ಳಲು ಕಾರಣರಾದವರನ್ನು ಶಿಕ್ಷಿಸಬೇಕೆಂದು ಎನ್ನವು ಆಗ್ರಹ ಗ್ರಾಮಸ್ಥರು ಮಾಡಿದ್ದು ಈ ಪ್ರಕರಣವನ್ನು ಕೂಲಂಕೂಷವಾಗಿ ತನಿಖೆ ನಡೆಸಿ, ದೇವಾನಂದ ಕುಟುಂಬಸ್ಥರಿಗೆ ನ್ಯಾಯ ಒದಗಿಸಿ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.