ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಾಳಗಿ ತಾಲೂಕಿನ ಕಲಗುರ್ತಿ ಗ್ರಾಮದ ಕೋಲಿ ಸಮಾಜದ ಯುವಕ ದೇವಾನಂದ ಕೋರಬಾ ಸಾವಿನ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಮತ್ತು ಆರೋಪಿತರ ಜತೆಗೆ ಶಾಮೀಲಾಗಿರುವ ಪೊಲೀಸರನ್ನು ಅಮಾನತ್ತುಗೊಳಿಸಬೇಕು ಎಂದು ಆಗ್ರಹಿಸಿ ಸೆ.೨೫ ರಂದು ನಗರದ ಜಿ¯್ಲÁಧಿಕಾರಿಗಳ ಕಚೇರಿಯ ಮುಂದೆ ನಿರಂತರ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಕೋಲಿ ಸಮಾಜ ಸಂಚಾಲಕರಾದ ಅವ್ವಣ್ಣ ಮ್ಯಾಕೇರಿ ತಿಳಿಸಿದರು.
ಸಮಾಜದ ಮುಖಂಡರ ಜತೆಗೂಡಿ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು, ಆತನ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡಬೇಕು. ತಪ್ಪು ಮಾಡಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ನಿರಂತರ ಹೋರಾಟ ಆರಂಭಿಸುವ ಮೊದಲು ಪೂರ್ವಭಾವಿಯಾಗಿ ಸೆ.೨೧ ರಂದು ಅಫಜಲಪುರ,ಆಳಂದ, ೨೨ ರಂದು ಜೇವರ್ಗಿ, ಚಿತ್ತಾಪುರ, ೨೩ ರಂದು ಸೇಡಂ, ಚಿಂಚೋಳಿ ಹಾಗೂ ೨೪ ಎಂದು ಕಲಬುರಗಿ ನಗರದಲ್ಲಿ ಸಮಾಜದ ಪ್ರಮುಖರ ಸಭೆಗಳನ್ನು ನಡೆಸಲಾಗುವುದು. ೨೫ ರಿಂದ ನಿರಂತರ ಹೋರಾಟ ಆರಂಭಿಸಲಾಗುವುದು ಎಂದು ತಿಳಿಸಿದರು.
ದೇವಾನಂದ ಸಾವಿನ ಪ್ರಕರಣ ಕುರಿತು ಜುಲೈ ೨೦ ರಂದು ನಾಲ್ವರ ವಿರುದ್ಧ ಮಾಡಬೂಳ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಇದುವರೆಗೂ ಆರೋಪಿತರನ್ನು ಬಂಧಿಸಿಲ್ಲ. ಎಂದು ಈಚೆಗೆ ಕಲಬುರಗಿಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರ‍್ನು ನಿಯೋಗ ಭೇಟಿ ಮಾಡಿದಾಗ ಕೂಡಲೇ ಆರೋಪಿತರ ಬಂಧಿಸಲು ಎಸ್ಪಿಯವರಿಗೆ ಸೂಚನೆ ನೀಡಿದ್ದಾರೆ. ಆದರೆ, ಇದುವರೆಗೂ ಬಂಧಿಸಿಲ್ಲ ಎಂದು ದೂರಿದರು.
ಈ ಪ್ರಕರಣದಲ್ಲಿ ಎಸ್ಪಿ ಹೊರತಪಡಿಸಿ, ಎಎಸ್‌ಪಿ, ಡಿಎಸ್ಪಿ, ಸಿಪಿಐ, ಪಿಎಸ್‌ಐ ಹಾಗೂ ಕೆಲ ಸಿಬ್ಬಂದಿ ಶಾಮೀಲಾಗಿದ್ದಾರೆ. ಹೀಗಾಗಿ ಬಂಧಿಸುತ್ತಿಲ್ಲ. ಹೊಸದಾಗಿ ಬಂದಿರುವ ಎಸ್ಪಿಯವರು ಈ ವಿಷಯ ಗಂಭೀರವಾಗಿ ಪರಿಗಣಿಸಿ ಬಂಧಿಸಬೇಕು ಎಂದು ಮ್ಯಾಕೇರಿ ಆಗ್ರಹಿಸಿದರು. ಅಲ್ಲದೆ ಪೊಲೀಸರು ಆತನ ಕುಟುಂಬಕ್ಕೆ ೩ ಲಕ್ಷ ರೂ. ಪರಿಹಾರದಂತೆ ನೆರವು ನೀಡಿದ್ದು ನೋಡಿದಾಗ ಅವರೇ ತಪ್ಪು ಮಾಡಿರುವುದು ಕಂಡು ಬರುತ್ತದೆ ಎಂದು ಹೇಳಿದರು.
ದೇವಾನಂದ ಸಾವಿನ ಪ್ರಕರಣ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು.ಕುಟುಂಬಕ್ಕೆ ಸರ್ಕಾರದಿಂದ ೨೫ ಲP್ಷÀ ರೂ.ಪರಿಹಾರ ನೀಡಬೇಕು. ಡಿಎಸ್ಪಿ,ಸಿಪಿಐ, ಪಿಎಸ್‌ಐ ಹಾಗೂ ಇತರರನ್ನು ಸಸ್ಪೆಂಡ್ ಮಾಡಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಕೋಲಿ ಸಮಾಜ ನಾಯಕರಾದ ಬಸವರಾಜ ಬೂದಿಹಾಳ, ಸಂತೋಷ ತಳವಾರ, ಶಾಂತಪ್ಪ ಕೂಡಿ, ಬಸವರಾಜ ಹರವಾಳ, ಅಂಬು ಡಿಗ್ಗಿ, ನಿಂಗಣ್ಣ ದೇವಣಗಾಂವ, ಸೋಮಶೇಖರ ಬಿಬ್ಬಳ್ಳಿ, ಬಿ.ಎಸ್.ಐನಾಪುರ ಮೊದಲಾದವರಿದ್ದರು.