ಮೊಳಕಾಲ್ಮೂರು: ಸ್ವಕುಳಸಾಳಿ ಸಮಾಜದ ಆರಾಧ್ಯ ದೈವ ಭಗವಾನ್ ಶ್ರೀ ಜಿಹ್ವೇಶ್ವರಸ್ವಾಮಿ ಪಲ್ಲಕ್ಕಿ ಉತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ನೆರವೇರಿತು.
ಪಟ್ಟಣದಲ್ಲಿ ಜಿಹ್ವೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಹಿನ್ನಲೆ ಕಳೆದ 12 ದಿನಗಳ ಕಾಲ ದೇವನಾಮ ಸ್ಮರಣೆ, ಅಷ್ಠೋತ್ತರ ಶತನಾಮಾವಳಿ ಸೇರಿದಂತೆ ಧಾರ್ಮಿಕ ವಿಧಿ ವಿಧಾನಗಳು ನಡೆದವು.
ಮಂಗಳವಾರ ಜಾತ್ರೆಯ ಕಡೆ ದಿನವಾಗಿದ್ದರಿಂದ ಬೆಳಗ್ಗೆ ಸ್ವಾಮಿಗೆ ವಿಶೇಷ ಅಲಂಕಾರ, ಪಂಚಾಮೃತ ಅಭಿಷೇಕ, ಶಿವ ಸಹಸ್ರನಾಮಾವಳಿ, ಪೂರ್ವಕ ಬಿಲ್ವಾರ್ಚನೆ, ಮಾತೆಯರಿಂದ ತೊಟ್ಟಿಲು ಉತ್ಸವ ಹಾಗೂ ಭಜನೆ ಕಾರ್ಯಕ್ರಮ ನಡೆಯಿತು.
ಮಧ್ಯಾಹ್ನ ಉತ್ಸವದ ಮೆರವಣಿಗೆ ನಂತರ ಶಿವಸದನದಲ್ಲಿ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ಜಾತ್ರೆಗೆ ತೆರೆ ಬಿದ್ದಿತು.
ಸಮಾಜದ ತಾಲೂಕು ಅಧ್ಯಕ್ಷ ಜಿ.ಎನ್.ನರೇಂದ್ರ ಕುಮಾರ್, ಗೌರವ ಅಧ್ಯಕ್ಷ ಡಿ.ಎಂ.ಈಶ್ವರಪ್ಪ, ಉಪಾಧ್ಯಕ್ಷ ಡಾ. ವಿನೋದ್ ಸರೋದೆ,
ಡಾ.ರಾಘವೇಂದ್ರ, ಪಾಂಡುರಂಗ, ಕೆ.ಎಲ್.ಧನಂಜಯ, ಎಚ್.ಕೆ.ಜ್ಞಾನದೇವ, ಡಿ.ಎಚ್.ರಾಜು, ಅಶೋಕ್, ವಿಶುಕುಮಾರ, ಸುರೇಶ್, ದಂಡುಮುರುಳಿ, ಅಕ್ಷಯಕುಮಾರ, ಮಲ್ಲಿಕಾರ್ಜುನ ಇದ್ದರು.
ಸರ್ವ ಸಮಾಜಕ್ಕೆ ಶಾಂತಿ, ಸಹಬಾಳ್ವೆ ಸಿಗಲೆಂದು ಇಡೀ ಸ್ವಕುಳಸಾಳಿ ಸಮಾಜ ಒಂದುಗೂಡಿ ತನು, ಮನ, ಧನ ಪೂರ್ವಕ ಸೇವೆಯಲ್ಲಿ ಅನಾಧಿ ಕಾಲದಿಂದಲೂ ನಡೆಸಿಕೊಂಡು ಬಂದಿರುವ ಜಾತ್ರಾರಾಧನೆ ಶ್ರೇಷ್ಟತೆಯನ್ನ ಪಡೆದುಕೊಂಡಿದೆ.ಜಿ.ಎನ್.ನರೇಂದ್ರ ಗಾಯಕ್ವಾಡ್, ಸ್ವಕುಳಸಾಳಿ ಸಮಾಜದ ಅಧ್ಯಕ್ಷ