ದೇವನಹಳ್ಳಿ : ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವಿದ್ಯುತ್ ಮೀಟರ್ ಕಿತ್ತುಕೊಂಡು ಹೋಗಿ ಆರು ತಿಂಗಳು ಗ್ರಾಹಕರೊಬ್ಬರನ್ನು ಕಚೇರಿಗೆ ಅಲೆದಾಡಿಸಿದ ದೇವನಹಳ್ಳಿ ಬೆಸ್ಕಾಂ ಎಇಇಯನ್ನು ಅಮಾನತು ಮಾಡಬೇಕು ಎಂದು ಬಹುಜನಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಎಂ.ನರಸಿಂಹರಾಜು ಒತ್ತಾಯಿಸಿದರು.
ದೇವನಹಳ್ಳಿಯ ರಾಣಿ ವೃತ್ತದ ಬಳಿ ಇರುವ ನೀಲೇರಿ ವೆಂಕಟಲಕ್ಷ$್ಮಮ್ಮ ಅವರು ವಿದ್ಯುತ್ ಬಿಲ್ ಬಾಕಿ ಸಕಾಲಕ್ಕೆ ಕಟ್ಟುತ್ತಿದ್ದರೂ ಒಂಟಿ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮೀಟರ್ ಕಿತ್ತುಕೊಂಡು ಹೋಗಲಾಗಿದೆ. ಈ ದೃಶ್ಯ ಅಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದರಿಂದ ಎಇಇ ಬಳಿ ಈ ಬಗ್ಗೆ ಪ್ರಶ್ನಿಸಿದರೆ, ನಾವು ತೆಗೆದುಕೊಂಡು ಬಂದಿಲ್ಲ ಎಂಬ ಹಾರಿಕೆ ಉತ್ತರ ನೀಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು. ನಂತರ ವೆಂಕಟಲಕ್ಷ$್ಮಮ್ಮ ಮೀಟರ್ ಇಲ್ಲದೇ ವಿದ್ಯುತ್ಲೈನ್ ಮೂಲಕ ನೇರವಾಗಿ ಸಂಪರ್ಕ ತೆಗೆದುಕೊಂಡ ಎರಡೇ ದಿನಕ್ಕೆ ಎಇಇ ಜಾಗೃತದಳದ ಅಧಿಕಾರಿಗಳಿಗೆ ದಾಳಿ ಮಾಡಿಸಿ ಕೇಸ್ ಹಾಕಿಸಿ 16,750 ದಂಡ ರೂ. ಹಾಕಿಸಿದ್ದಾರೆ. ವಿದ್ಯುತ್ ಸಂಪರ್ಕ ನೀಡುವುದಿಲ್ಲ, ಸೋಲಾರ್ ಹಾಕಿಸಿಕೊಳ್ಳಿ ಎಂದು ಹೇಳಿದ್ದಾರೆ ಎಂದರು.
ಕೊನೆಗೆ ಹಲವು ಸಂಟನೆಗಳ ಮೂಲಕ ಮೇಲಧಿಕಾರಿಗಳ ಬಳಿ ದೂರು ದಾಖಲಿಸಿ ಬಿಸಿ ಮುಟ್ಟಿಸಿದಾಗ 6 ತಿಂಗಳ ನಂತರ ಅಂದರೆ 16 ದಿನಗಳ ಹಿಂದೆ ಮತ್ತೆ ಅದೇ ಜಾಗಕ್ಕೆ ಅದೇ ಮೀಟರ್ ತಂದು ಅಳವಡಿಸಿದ್ದಾರೆ ಎಂದರು. ವೆಂಕಟಲಕ್ಷ$್ಮಮ್ಮ ಅವರ ಜಮೀನಿನಲ್ಲಿ ಬುದ್ಧ, ಬಸವ, ಅಂಬೇಡ್ಕರ್ ದೇವಾಲಯ ಮತ್ತು ವಾಸದ ಮನೆ ಇದ್ದು, ಇದು ಬೆಂಗಳೂರು&ಹೈದರಾಬಾದ್ ಹೆದ್ದಾರಿಗೆ ಹೊಂದಿಕೊಂಡಿದೆ. ಬಹುಕೋಟಿ ಬೆಲೆಬಾಳುವ ಭೂಮಿ ಆಗಿರುವುದರಿಂದ ಭೂಮಿ ಲಪಟಾಯಿಸಲು ಭೂಮಾಫಿಯಾದವರು ತಂತ್ರ ರೂಪಿಸುತ್ತಿದ್ದಾರೆ ಎಂದು ಆಪಾದಿಸಿದರು. ಗ್ರಾಹಕರಿಗೆ ಅನಗತ್ಯ ತೊಂದರೆ ನೀಡುವ ಎಇಇ ಅಮಾನತುಗೊಳಿಸಿ ಇಲಾಖಾ ತನಿಖೆ ಮಾಡಬೇಕು ಎಂದು ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಬಂಗಾರಪ್ಪ ಆಗ್ರಹಿಸಿದರು. ತಾಲೂಕು ಉಪಾಧ್ಯಕ್ಷ ಜೊನ್ನಹಳ್ಳಿ ಮುನಿರಾಜು, ನೀಲೇರಿ ನಾರಾಯಣಸ್ವಾಮಿ, ತಾಲೂಕು ಪ್ರಧಾನ ಕಾರ್ಯದರ್ಶಿ ಕೋರಮಂಗಲ ನರಸಿಂಹಮೂರ್ತಿ, ತಾಲೂಕು ಖಜಾಂಚಿ ನಾಗಮಣಿ, ಯುವ ಟಕದ ತಾಲುಕು ಅದ್ಯಕ್ಷ ಚಂದ್ರು, ಪದಾಧಿಕಾರಿಗಳಾದ ಗಂಗಾಧರ್, ಕುಂಬಾರ ಸಂದ ಎಂ.ನಂಜುಂಡಯ್ಯ ಇದ್ದರು.
ವೆಂಕಟಲಕ್ಷ್ಮಮ್ಮ ನಾರಾಯಣಪ್ಪ ಎಂಬುವರು ಮನೆಯ ಮೀಟರ್ ಎಲ್ಲಿ ಎಂದು ಕೇಳಿದ್ದರು. ನನಗೆ ಗೊತ್ತಿಲ್ಲ ಎಂದಿದ್ದು ಸತ್ಯ. ಆದರೆ, ಅದನ್ನು ಜಾಗೃತ ದಳದವರು ತೆಗೆದುಕೊಂಡು ಹೋಗಿದ್ದಾರೆ ಎಂದು ಭಾವಿಸಿದ್ದೆ. ನಮ್ಮ ಮೀಟರ್ ರೀಡರ್ ವಿಚಾರಿಸಿದಾಗ ಅವರು ಮೀಟರ್ ಅನ್ನು ಯಾರಿಗೂ ಹೇಳದೇ ತೆಗೆದುಕೊಂಡು ಬಂದಿರುವುದು ತಿಳಿಯಿತು. ಸ್ವಲ್ಪದಿನ ತಡವಾದರೂ ಮೀಟರ್ ಇದ್ದ ಜಾಗದಲ್ಲಿ ಮತ್ತೆ ಮೀಟರ್ ಅಳವಡಿಸಲಾಗಿದೆ. ಇಲ್ಲಿ ಮೀಟರ್ ರೀಡರ್ ಲೋಪವಾಗಿದೆ. ನಮ್ಮ ಪಾತ್ರವೇನೂ ಇಲ್ಲ. > ಬಿ.ಎಂ. ಲ್ಮಕಾಂತ್ ಬೆಸ್ಕಾಂ ಎಇಇ