ಗುಂಡ್ಲುಪೇಟೆ ತಾಲೂಕಿನ ದೇವಲಾಪುರ ಗೇಟ್ ಸಮೀಪ ಸಾರಿಗೆ ಬಸ್ ನಿಲುಗಡೆಗೆ ಒತ್ತಾಯಿಸಿ ಗ್ರಾಮಸ್ಥರು ಬಸ್ ತಡೆ ನಡೆಸಿದರು. 
ಜಿಲ್ಲೆ

ದೇವಲಾಪುರ ಗ್ರಾಮಸ್ಥರ ಪ್ರತಿಭಟನೆ

ಲೋಕೇಶ್ ಮನು. ಡಿ

ಗುಂಡ್ಲುಪೇಟೆ: ತಮ್ಮ ಗ್ರಾಮದ ಗೇಟ್ ಸಮೀಪ ನಿಲುಗಡೆ ಇದ್ದರೂ ಬಸ್ ನಿಲ್ಲಿಸದಿರುವುದನ್ನು ಖಂಡಿಸಿ ದೇವಲಾಪುರ ಗ್ರಾಮಸ್ಥರು ಬಸ್ ತಡೆದು ಪ್ರತಿಭಟನೆ ನಡೆಸಿದರು.

ಗ್ರಾಮವು ಜಿಲ್ಲಾ ಸಂಪರ್ಕ ರಸ್ತೆಯಲ್ಲಿದ್ದರೂ ಇತ್ತೀಚೆಗೆ ಚಾಲಕರು ಬಸ್ ನಿಲ್ಲಿಸುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಸಾರಿಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಬಸ್ಸುಗಳನ್ನು ತಡೆದು ಸ್ಥಳಕ್ಕೆ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದರು.

ಸ್ಥಳಕ್ಕೆ ಆಗಮಿಸಿದ ತೆರಕಣಾಂಬಿ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಕೆ.ಎಂ.ಮಹೇಶ ದೂರವಾಣಿ ಮೂಲಕ ಸಾರಿಗೆ ಅಧಿಕಾರಿಗಳೊಂದಿಗೆ ಮಾತನಾಡಿ, ಹಿಂದಿನಂತೆ ಬಸ್ ನಿಲುಗಡೆ ಮಾಡಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.