ಮಸ್ಕಿ ರಥ ಬೀದಿಯಲ್ಲಿ ಬಿಜೆಪಿಯಿಂದ ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭದ ನೇರ ಪ್ರಸಾರದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.  
ಜಿಲ್ಲೆ

ವಿಶ್ವಗುರು ಆಗುವತ್ತ ಭಾರತ ದಾಪುಗಾಲು

ಶಶಿಧರ ಎಲ್

ದೇವದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರ 10 ವರ್ಷಗಳ ಉತ್ತಮ ಆಡಳಿತದಿಂದ ಭಾರತ ಜಗತ್ತಿನ ಬಲಿಷ್ಠ ರಾಷ್ಟ್ರವಾಗಿದ್ದು, ಮೂರನೇ ಅವಧಿಯಲ್ಲಿ ದೇಶ ವಿಕಾಸದತ್ತ ಮುನ್ನಡೆಯಲಿದೆ ಎಂದು ಕನ್ನಡ ವಿವಿ ಸಿಂಡಿಕೇಟ್ ಮಾಜಿ ಸದಸ್ಯ ನಾಗರಾಜ ಅಕ್ಕರಕಿ ಹೇಳಿದರು.

ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಜೆಪಿ, ಮೋದಿ ಅಭಿಮಾನಿಗಳು ಹಾಗೂ ಹಿಂದುಪರ ಸಂಘಟನೆಗಳಿಂದ ಆಯೋಜಿಸಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.

ವಿದೇಶಿ ಶಕ್ತಿಗಳ ಕೈವಾಡ, 30ಕ್ಕೂ ಹೆಚ್ಚು ವಿರೋಧ ಪಕ್ಷಗಳು ಮೋದಿ ವಿರುದ್ಧ ಇಲ್ಲ ಸಲ್ಲದ ಅಪಪ್ರಚಾರ, ಹೆಜ್ಜೆ ಹೆಜ್ಜೆಗೂ ಕುತಂತ್ರ ನಡೆಸಿದರೂ ದೇಶದ ಜನತೆ ಮೋದಿ ಅವರ ಕೈಬಿಡಲಿಲ್ಲ. ಮೂರನೇ ಅವಧಿಯಲ್ಲಿ ಭಾರತ ವಿಶ್ವಗುರು ಆಗುವತ್ತ ದಾಪುಗಾಲು ಹಾಕಲಿದೆ.

ದೇಶದಲ್ಲಿ ಶೇ.34ರಿಂದ 36 ಜನರು ಮತದಾನದಿಂದ ದೂರ ಉಳಿದಿದ್ದಾರೆ. ಇದು ಉತ್ತಮ ಬೆಳವಣಿಗೆಯಲ್ಲ. ಮುಂದಿನ ದಿನಗಳಲ್ಲಿ ಶೇ.100ರಷ್ಟು ಮತದಾನ ಮಾಡಬೇಕು ಎಂದರು.