ದೇವದುರ್ಗ: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಲಾಗುತ್ತಿದೆ. ನದಿದಂಡೆ ಗ್ರಾಮಸ್ಥರು ಕುಡಿಯಬಾರದು ಎಂದು ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಸೂಚಿಸಿದರು.
ನದಿದಂಡೆ ಗ್ರಾಮಗಳಾದ ಕೊಪ್ಪರ, ಕರ್ಕಿಹಳ್ಳಿ, ಕೋಣಚಪ್ಪಳಿ ಭೇಟಿ ನೀಡಿ ಶುಕ್ರವಾರ ಗ್ರಾಮಸ್ಥರ ಸಭೆಯಲ್ಲಿ ಮಾತನಾಡಿದರು. ನದಿಗೆ ಮಳೆ ನೀರು ಹರಿದು ಬರುತ್ತಿದ್ದು, ಕಲುಷಿತವಾಗಿರುತ್ತದೆ. ಹೊಳೆ ನೀರು ಕುಡಿದರೆ ವಾಂತಿ-ಭೇದಿ ಬರುವ ಸಾಧ್ಯತೆಯಿದೆ. ಹೀಗಾಗಿ ಹೊಳೆ ನೀರನ್ನು ಗೃಹ ಉಪಯೋಗಕ್ಕೆ ಮಾತ್ರ ಬಳಸಬೇಕು ಎಂದು ಹೇಳಿದರು.
ನದಿಯಲ್ಲಿ ನೀರಿನ ಪ್ರಮಾಣ ದಿನೇ ದಿನೆ ಹೆಚ್ಚುತ್ತಿದ್ದು ಯಾವುದೇ ಕಾರಣಕ್ಕೆ ಜನರು ನದಿಗೆ ಇಳಿಯುವ ಸಾಹಸ ಮಾಡಬಾರದು. ಯಾಕೆಂದರೆ ಜಲಚರ ಪ್ರಾಣಿ, ಮೊಸಳೆ, ಹಾವು ಬರುವ ಸಾಧ್ಯತೆ ಇರುತ್ತದೆ. ಅಲ್ಲದೆ ರೈತರು ಪಂಪ್‌ಸೆಟ್ ಅಳವಡಿಸುವುದು, ತೆರವು ಮಾಡುವ ಕೆಲಸ ಮಾಡಬಾರದು. ನದಿ ದಂಡೆ ರೈತರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಿದರು.
ಯಥಾಸ್ಥಿತಿ: ಕೃಷ್ಣಾನದಿ ಶುಕ್ರವಾರವೂ ಭೋರ್ಗೆರೆಯುತ್ತಿದ್ದು 68,810 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಹೂವಿನಹೆಡಗಿ ಶ್ರೀಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಎರಡನೇ ದಿನವೂ ಸಂಪೂರ್ಣ ಮುಳುಗಡೆಯಾಗಿದೆ. ಜಲಾಶಯದಲ್ಲಿ 62 ಸಾವಿರ ಒಳಹರಿವು ಇದೆ. ನಾರಾಯಣಪುರ ಜಲಾಶಯ ಬಹುತೇಕ ಭರ್ತಿಯಾಗಿದ್ದು 30.39ಟಿಎಂಸಿ ಅಡಿ ನೀರಿನ ಸಂಗ್ರಹವಾಗಿದೆ. ಹೆಚ್ಚುವರಿ ನೀರು ಬಂದಿರುವ ಕಾರಣ ವೀರಗೋಟದ ಶ್ರೀಮೌನಲಿಂಗೇಶ್ವರ ದೇವಸ್ಥಾನ, ಅಂಜಳದ ಬಸವೇಶ್ವರ ದೇವಸ್ಥಾನ, ಕೊಪ್ಪರದ ಶ್ರೀಲಕ್ಷ್ಮೀ ನರಸಿಂಹ ದೇವಸ್ಥಾನ, ಬಸವೇಶ್ವರ ದೇವಸ್ಥಾನ, ಶ್ರೀಆಂಜನೇಯ ದೇವಸ್ಥಾನ, ಅರಸಿಣಿಗಿ ಶ್ರೀಅಣೆಮಲ್ಲೇಶ್ವರ