ದೇವದುರ್ಗ ತಾಲೂಕಿನ ಸುಂಕೇಶ್ವಹಾಳದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಗೆ ಎಸ್ಡಿಎಂಸಿ ಉಪಾಧ್ಯಕ್ಷೆ ರೇಣುಕಾ ಬಹುಮಾನ ನೀಡಿದರು. ಎಸ್ಡಿಎಂಸಿ ಅಧ್ಯಕ್ಷ ಹೊನ್ನಪ್ಪ ಕನಕರೆಡ್ಡಿ, ಉಪಾಧ್ಯಕ್ಷೆ ರೇಣುಕಾ, ಸಿಆರ್‌ಪಿ ವೆಂಕಟಾಂಜನೇಯ, ಪ್ರಮುಖರಾದ ಶಂಭುಲಿಂಗ, ಅಂಬಣ್ಣ, ಬಸವರಾಜ ಕೌಟಗಿ, ಲಕ್ಷ್ಮಣ, ರಾಮು ಇದ್ದರು. 
ಜಿಲ್ಲೆ

ಪ್ರಾಥಮಿಕ ಹಂತ ವಿದ್ಯಾರ್ಥಿಗಳಿಗೆ ಮಹತ್ವ ಘಟ್ಟ

ಪ್ರವೀಣ ಉದುಸಾ ದಲಬಂಜನ್

ದೇವದುರ್ಗ: ವಿದ್ಯಾರ್ಥಿಗಳಿಗೆ ಒತ್ತಾಯದಿಂದ ಅಕ್ಷರ ಕಲಿಸದೆ ಪ್ರೀತ್ಗಿ ಮನೋಭಾವನೆಯಿಂದ ಬೋಧನೆ ಮಾಡಬೇಕು. ಪ್ರತಿಭಾ ಕಾರಂಜಿ ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗಲಿದೆ ಎಂದು ದೇವದುರ್ಗ ವಲಯ ಬಿಆರ್‌ಪಿ ಆರ್.ಟಿ.ದಾಸರ್ ಹೇಳಿದರು.

ತಾಲೂಕಿನ ಸುಂಕೇಶ್ವರಹಾಳದಲ್ಲಿ ಜಿಲ್ಲಾಡಳಿತ, ಜಿಪಂ, ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಸಾಧನೆ ಎನ್ನುವುದು ಯಾರ ಸೊತ್ತಲ್ಲ. ಪರಿಶ್ರಮ ಪಡುವವನ ಸೊತ್ತು. ಪ್ರಾಥಮಿಕ ಹಂತ ಮಕ್ಕಳ ಕಲಿಕೆಗೆ ಮಹತ್ವದ ಘಟ್ಟ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಶಿಕ್ಷಕರು ಗುರುತಿಸುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದರು.

ಶಾವಂತಗೇರಾ ಶಾಲೆ ಮುಖ್ಯಶಿಕ್ಷಕ ಮಹೇಶ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅನೇಕ ಪ್ರತಿಭೆಯಿದ್ದು ಅದನ್ನು ಗುರುತಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಪಾಲಕರು ಮಕ್ಕಳನ್ನು ಶಾಲೆಗೆ ದಾಖಲಿಸಿದರೆ ಜವಾಬ್ದಾರಿ ಮುಗಿಯಲ್ಲ. ಶಾಲೆಗೆ ಆಗಾಗ ಭೇಟಿ ನೀಡಿ ಮಕ್ಕಳ ಪ್ರತಿಭೆ ಅರಿತು ಪ್ರೋತ್ಸಾಹಿಸಬೇಕು ಎಂದರು.

ಎಸ್ಡಿಎಂಸಿ ಅಧ್ಯಕ್ಷ ಹೊನ್ನಪ್ಪ ಕನಕರೆಡ್ಡಿ, ಉಪಾಧ್ಯಕ್ಷೆ ರೇಣುಕಾ, ಸಿಆರ್‌ಪಿ ವೆಂಕಟಾಂಜನೇಯ, ಪ್ರಮುಖರಾದ ಶಂಭುಲಿಂಗ, ಅಂಬಣ್ಣ, ಬಸವರಾಜ ಕೌಟಗಿ, ಲಕ್ಷ್ಮಣ, ರಾಮು, ಎಸ್ಡಿಎಂಸಿ ಸದಸ್ಯರಾದ ರಕ್ನಾಕರ, ಬಸವರಾಜ, ಈಶಪ್ಪ, ವಿಶ್ವನಾಥ ಇತರರಿದ್ದರು.