ದೇವದುರ್ಗ ತಾಲೂಕಿನ ಗಬ್ಬೂರು ಸಮೀಪದ ಸುಲ್ತಾನಪುರಮಠದ ಶ್ರೀ ಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಮಂಗಳವಾರ ಸದ್ಭಾವನಾ ಪಾದಯಾತ್ರೆ ಕೈಗೊಂಡಾಗ ಗರತಿಯೊಬ್ಬರು ಅವರ ಪಾದಗಳಿಗೆ ನೀರೆರೆದು ಭಕ್ತಿ ಸಮರ್ಪಿಸಿದರು. 
ಜಿಲ್ಲೆ

ಸುಲ್ತಾನಪುರ ಶ್ರೀ ಸದ್ಬಾವನಾ ಪಾದಯಾತ್ರೆ

ದೇವದುರ್ಗ: ತಾಲೂಕಿನ ಸುಲ್ತಾನಪುರ ಪಂಚಾಕ್ಷರಿ ತೀರ್ಥ ಬೃಹನ್ಮಠದ ಶ್ರೀ ಶಂಭುಸೋಮನಾಥ ಶಿವಾಚಾರ್ಯ ಸ್ವಾಮೀಜಿ ಮಂಗಳವಾರ 6ನೇ ವರ್ಷದ ಸದ್ಭಾವನಾ ಪಾದಯಾತ್ರೆ ಕೈಗೊಂಡರು.

ಸುಲ್ತಾನಪುರ ಶ್ರೀ ಮಠದಿಂದ ಗಬ್ಬೂರಿನ ಶ್ರೀ ಬಿಬ್ಬಿಬಾಚರಸರ ಗದ್ದುಗೆವರೆಗೆ ಪಾದಯಾತ್ರೆ ನಡೆದಿದ್ದು, ಯಾತ್ರೆ ಉದ್ದಕ್ಕೂ ಭಕ್ತರು ಬಾಜಾ-ಭಜಂತ್ರಿ, ಡೊಳ್ಳು ಮೇಳ, ಭಜನಾ ಮಂಡಳಿಗಳು ಸೇರಿ ಗಬ್ಬೂರು, ಸುಲ್ತಾನಪುರ, ಬೂದಿನಾಳ, ಇಂಗಳದಾಳ, ಹದ್ದಿನಾಳ ಮತ್ತಿತರ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು. ಶ್ರೀ ಸದಾಶಿವಯ್ಯ ಮಠದಲ್ಲಿ ಪ್ರಸಾದ ವಿತರಣೆ ನಡೆಯಿತು.

ನಂತರ ಮಾತನಾಡಿದ ಶ್ರೀ ಶಂಭುಸೋಮನಾಥ ಶಿವಾಚಾರ್ಯರು, ಜಗತ್ತಿನಲ್ಲಿ ಶಾಂತಿ, ಸಮೃದ್ಧಿ ನೆಲೆಸಲು ಭಗವಂತನಲ್ಲಿ ಪ್ರಾರ್ಥಿಸಿ ಈ ಪಾದಯಾತ್ರೆ ನಡೆಸಲಾಗುತ್ತಿದೆ. ಭಾವೈಕ್ಯ ಜೀವನ, ಕೃಷಿಕರ ಬದುಕು ಸಮೃದ್ಧಿಯಾಗಲು, ರೋಗ ರಹಿತ ಜೀವನ ನಡೆಸಲು ಭಕ್ತರಿಗೆ ಅನುಕೂಲ ಕಲ್ಪಿಸುವಂತೆ ಸಂಕಲ್ಪತೊಟ್ಟು ಪಾದಯಾತ್ರೆ ನಡೆಸಲಾಗುತ್ತಿದೆ. ಪ್ರತಿ ವರ್ಷ ಪಾದಯಾತ್ರೆ ನಡೆಸುತ್ತ ಬರಲಾಗಿದ್ದು, ಈ ಬಾರಿ ಕರೊನಾ ಇರುವ ಕಾರಣ ಸರಳವಾಗಿ ನಡೆಸಲಾಗಿದೆ. ಈ ವೇಳೆ ಕೋವಿಡ್ ನಿಯಮಗಳನ್ನು ಪಾಲಿಸಲಾಗಿದೆ ಎಂದರು.