ದೇವದುರ್ಗ ತಾಲೂಕಿನಲ್ಲಿ ನಾರಾಯಣಪುರ ಬಲದಂಡೆ ನಾಲೆ ಆಧುನೀಕರಣ ಕಾಮಗಾರಿ ಸ್ಥಳಕ್ಕೆ ಜೆಡಿಎಸ್ ನಾಯಕರು ಭೇಟಿ ನೀಡಿ ಪರಿಶೀಲಿಸಿದರು. 
ಜಿಲ್ಲೆ

ಕಳಪೆ ಕಾಮಗಾರಿಗೆ ಜೆಡಿಎಸ್ ಅಸಮಾಧಾನ

Raichur

ದೇವದುರ್ಗ: ತಾಲೂಕಿಗೆ ಕೋಟ್ಯಂತರ ರೂ. ಅನುದಾನ ಬಂದರೂ ಕಳಪೆ ಕಾಮಗಾರಿಯಿಂದ ನೀರಲ್ಲಿ ಹೋಮ ಮಾಡಿದಂತಾಗಿದ್ದು, ಕಳಪೆ ಕಾಮಗಾರಿಗಳ ದರ್ಬಾರ್ ನಡೆದಿದೆ ಎಂದು ಜೆಡಿಎಸ್ ನಾಯಕಿ ಕರೇಮ್ಮ ನಾಯಕ ಆರೋಪಿಸಿದರು.

ನಾರಾಯಣಪುರ ಬಲದಂಡೆ ನಾಲೆ ಆಧುನೀಕರಣ ಕಾಮಗಾರಿ ಸ್ಥಳದಲ್ಲಿ ಶುಕ್ರವಾರ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಶಾಸಕರ ಮೂಗಿನ ನೇರಕ್ಕೆ ಕಾಮಗಾರಿಗಳು ನಡೆಯುತ್ತಿವೆ. ಇದಕ್ಕೆ ಎನ್‌ಆರ್‌ಬಿಸಿ ಕೆಲಸವೇ ಸಾಕ್ಷಿ. 95 ಕಿಮೀ ಆಧುನೀಕರಣ ಕಾಮಗಾರಿಗೆ 956ಕೋಟಿ ರೂ. ಅನುದಾನ ಮಂಜುರಾಗಿದ್ದು, ಗುತ್ತಿಗೆದಾರರು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಮಣ್ಣು ಡಂಪಿಂಗ್ ಮಾಡಿಲ್ಲ, ನಿಗದಿಪಡಿಸಿದಷ್ಟು ಕಾಂಕ್ರೀಟ್ ಹಾಕುತ್ತಿಲ್ಲ. ಕ್ಯೂರಿಂಗ್ ಕೂಡ ಸಮರ್ಪಕವಾಗಿ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ, ಇಂಜಿನಿಯರ್ ಮಲ್ಲಪ್ಪ, ಮುಖಂಡರಾದ ಶರಣಪ್ಪ ಬಳೆ, ದುರುಗಪ್ಪ ನಾಯಕ ಜಾಲಹಳ್ಳಿ, ಶಾಲಂ ಉದ್ದಾರ್, ಹನುಮಗೌಡ, ಶಿವು ಕಾಳೆ, ಬಾಪುಗೌಡ ಪಾಟೀಲ್ ಇತರರು ಇದ್ದರು.