ಜಿಲ್ಲೆ

ಭಾರತದ ಸೈನಿಕರ ದಿಗ್ವಿಜಯ

ಪ್ರವೀಣ ಉದುಸಾ ದಲಬಂಜನ್

ದೇವದುರ್ಗ: ಪಹಾಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಗೆ ಪ್ರತಿಯಾಗಿ ಭಾರತದ ಸೇನಾ ಶಕ್ತಿ ಇಡೀ ಜಗತ್ತಿಗೆ ಅನಾವರಣವಾಗಿದೆ ಎಂದು ದೇವದುರ್ಗ ಸೈನಿಕ ತರಬೇತಿ ಅಕಾಡೆಮಿ ಅಧ್ಯಕ್ಷ ಭಾನುಪ್ರಕಾಶ ಖೇಣೇದ್ ಹೇಳಿದರು.

ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿ ಹಿನ್ನೆಲೆ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.

ಪಹಾಲ್ಗಾಮ್‌ನಲ್ಲಿ ಉಗ್ರರು ಅಮಾಯಕ ಪ್ರವಾಸಿರನ್ನು ಕೊಂದಿದ್ದು ಅತ್ಯಂತ ಅಮಾನವೀಯ. ಇದಕ್ಕೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನದ 9 ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿ ತಕ್ಕ ಉತ್ತರ ನೀಡಿದೆ. ದೇಶದ ಸೈನಿಕರಿಂದ ಪೆಟ್ಟು ತಿಂದು ಜಗತ್ತಿನ ಮುಂದೆ ಪಾಕಿಸ್ತಾನ ಬೆತ್ತಲಾಗಿದೆ. ಇದು ಭಾರತದ ಸೈನಿಕರ ದಿಗ್ವಿಜಯವಾಗಿದೆ ಎಂದು ಹೇಳಿದರು.

ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಸುಭಾಷ್ಚಂದ್ರ ಪಾಟೀಲ್, ಅಕಾಡೆಮಿ ಸಂಚಾಲಕ, ಮಾಜಿ ಸೈನಿಕ ಪಂಪಣ್ಣ ಅಕ್ಕರಕಿ, ಅಕ್ಕಮ್ಮ ದೇವಿ, ವಿಶ್ವನಾಥ ಕೋರಿ, ಗಂಗನಗೌಡ ಗೌರಂಪೇಟೆ ಹಾಗೂ ತರಬೇತಿ ಶಿಬಿರಾರ್ಥಿಗಳು ಇದ್ದರು.