ಜಾಗತಿಕ ಬಂಡಾವಳ ಹೂಡಿಕೆದಾರರ ಸಭೆ ಖಂಡಿಸಿ ದೇವದುರ್ಗದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿಭಟನೆ ನಡೆಸಿತು.  
ಜಿಲ್ಲೆ

ಸರ್ಕಾರದಿಂದ ರೈತ ವಿರೋಧಿ ನೀತಿ

Raichur

ದೇವದುರ್ಗ: ಲಾಕ್‌ಡೌನ್, ಪ್ರಾಕೃತಿಕ ವಿಕೋಪಗಳಿಂದ ರೈತಾಪಿ ವರ್ಗ ತತ್ತರಿಸಿರುವ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ಖಂಡಿಸಿ ತಾಲೂಕು ಆಡಳಿತಸೌಧದ ಎದುರು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು.

ಒಂದೆಡೆ ದೇಶದಲ್ಲಿ ರೈತಾಪಿ ವರ್ಗ, ಕೂಲಿಕಾರರು ತತ್ತರಸಿದ್ದು, ಇನ್ನೊಂದೆಡೆ ಸರ್ಕಾರ ರೈತ ವಿರೋಧಿ ನೀತಿ ಮುಂದುವರಿಸಿದೆ. ದೇಶ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿ ರೈತರ ಜಮೀನು ಕಸಿದುಕೊಂಡು ಬಂಡವಾಳದಾರರಿಗೆ ಧಾರೆ ಎರೆಯಲು ಸರ್ಕಾರ ಮುಂದಾಗಿದೆ. ಇದರಿಂದ ರೈತರಿಂದ ಲಕ್ಷಾಂತರ ಭೂಮಿ ಕಸಿದುಕೊಳ್ಳುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

ಕೂಡಲೇ ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ತೀರ್ಮಾನದಿಂದ ಹಿಂದೆ ಸರಿಯಬೇಕು. ವಿದ್ಯುತ್ ಮಸೂದೆ ಸಂಸತ್‌ನಲ್ಲಿ ವಾಪಸ್ ಪಡೆಯಬೇಕು. ಅತಿವೃಷ್ಟಿಯಿಂದ ಬೆಳೆ ಹಾಗೂ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡಬೇಕು. ಗ್ರಾಮೀಣ ಜನರ ಎಲ್ಲ ರೀತಿಯ ಸಾಲಮನ್ನಾ ಮಾಡಬೇಕು.