ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕಿ ಕರೆಮ್ಮ ಜಿ.ನಾಯಕ ಭೂಮಿಪೂಜೆ ನೆರವೇರಿಸಿದರು. ಮುಖಂಡರಾದ ಸಿದ್ದನಗೌಡ ಮೂಡಲಗುಂಡ, ಸಿದ್ದಣ್ಣ ಗಣೆಕಲ್, ರೇಣುಕಾ ಮಯೂರಸ್ವಾಮಿ, ಗೋವಿಂದರಾಜ, ಇಸಾಕ್ ಮೇಸ್ತ್ರಿ, ಮಹೇಶಗೌಡ ಕಾಕರಗಲ್, ಪ್ರಭು ದೊರೆ, ರಂಗನಾಥ ಇತರರಿದ್ದರು. 
ಜಿಲ್ಲೆ

ಮೂಲ ಸೌಲಭ್ಯ ಒದಗಿಸಲು ಒತ್ತು

ಪ್ರವೀಣ ಉದುಸಾ ದಲಬಂಜನ್

ದೇವದುರ್ಗ: ಅಭಿವೃದ್ಧಿ ಕಾಮಗಾರಿಗಳ ಮೂಲಕ ಕ್ಷೇತ್ರದ ಜನರ ನಂಬಿಕೆ ಉಳಿಸಿಕೊಳ್ಳುವೆ ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.

ತಾಲೂಕಿನ ಚಿಂಚೋಡಿ ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದ ಅಂಬೇಡ್ಕರ್ ಸಮುದಾಯ ಭವನ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಗುರುವಾರ ಮಾತನಾಡಿದರು.

ಯರಗುಡ ಗ್ರಾಮದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ, ಲಿಂಗದಳ್ಳಿಯಲ್ಲಿ 34 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ, ಚರಂಡಿ, ಶಾಲಾ ಕೊಟ್ಟಡಿ, ಮುದಗೊಟದಲ್ಲಿ ಮೂಲಸೌಲಭ್ಯಕ್ಕೆ 36ಲಕ್ಷ, ಜಾಲಹಳ್ಳಿಯಲ್ಲಿ ಹುತ್ತಿನ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ 5 ಲಕ್ಷ, 1ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ, 4 ಶಾಲಾ ಕೊಟ್ಟಡಿ ನಿರ್ಮಾಣ 58 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಜಂಬಲದಿನ್ನಿಯಲ್ಲಿ ಶಾಲೆಗೆ 15 ಲಕ್ಷ ರೂ., ಕರಿಗುಡ್ಡದಲ್ಲಿ 1.15 ಲಕ್ಷ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಜನರಿಗೆ ಮೂಲಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಮಾತ್ರವಲ್ಲ ಬೇರೆಬೇರೆ ಇಲಾಖೆಯಿಂದಲೂ ಅನುದಾನ ತರಲಾಗಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕು. ಜನರಿಂದ ದೂರುಬಂದರೆ ಆಲಿಸಬೇಕು.

ಅಧಿಕಾರಿಗಳು ಜನರ ಸಮಸ್ಯೆ ಕೇಳಿ ಪರಿಹಾರ ಕಲ್ಪಿಸಲು ಮುಂದಾಗಬೇಕು. ಹೀಗಾಗಲೇ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ಎರಡು ಹಂತದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಎಲ್ಲ ಹಳ್ಳಿಗೂ ಮೂಲಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಜ್‌ಕುಮಾರ್, ಮುಖಂಡರಾದ ಸಿದ್ದನಗೌಡ ಮೂಡಲಗುಂಡ, ಸಿದ್ದಣ್ಣ ಗಣೆಕಲ್, ರೇಣುಕಾ ಮಯೂರಸ್ವಾಮಿ, ಗೋವಿಂದರಾಜ, ಇಸಾಕ್ ಮೇಸ್ತ್ರಿ, ಮಹೇಶಗೌಡ ಕಾಕರಗಲ್, ಪ್ರಭು ದೊರೆ, ರಂಗನಾಥ ಇತರರಿದ್ದರು.