ದೇವದುರ್ಗ ತಾಲೂಕು ಕೋಣಚಪ್ಪಳಿ ಗ್ರಾಮದಲ್ಲಿ ಅನಧಿಕೃವಾಗಿ ಸಂಗ್ರಹಿಸಿದ್ದ ಮರಳನ್ನು ಅಧಿಕಾರಿಗಳು ಗುರುವಾರ ಸಂಜೆ ವಶಕ್ಕೆ ಪಡೆದರು. 
ಜಿಲ್ಲೆ

ಕೃಷ್ಣಾ ನದಿದಂಡೆ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳು ಜಪ್ತಿ

Raichur

ದೇವದುರ್ಗ: ತಾಲೂಕಿನ ಕೃಷ್ಣಾ ನದಿದಂಡೆ ಗ್ರಾಮ ಕೋಣಚಪ್ಪಳಿಯಲ್ಲಿ ಅನಧಿಕೃತವಾಗಿ ಮರಳು ಸಂಗ್ರಹಿಸಿದ್ದ ಅಡ್ಡೆ ಮೇಲೆ ವಿವಿಧ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿ ಅಪಾರ ಪ್ರಮಾಣದ ಮರಳು ವಶಕ್ಕೆ ಪಡೆದರು. ಮೂರು ಕಡೆ ಸಂಗ್ರಹಿಸಿದ್ದ ಸುಮಾರು 4.46 ಲಕ್ಷ ರೂ. ಮೌಲ್ಯದ 569 ಮೆಟ್ರಿಕ್ ಟನ್ ಮರಳು ಹಾಗೂ 50 ಸಾವಿರ ರೂ. ಮೌಲ್ಯದ ಟ್ರ್ಯಾಕ್ಟರ್ ಟ್ರಾಲಿ ಜಪ್ತಿ ಮಾಡಲಾಗಿದೆ. ಗ್ರಾಮದ ಮೌನೇಶ, ರಂಗನಾಥ ಹಾಗೂ ಶರಣಯ್ಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ದಾಳಿ ವೇಳೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಮಂಜುನಾಥ, ಪಿಎಸ್‌ಐ ಕೆ.ರಂಗಯ್ಯ ಹಾಗೂ ಸಿಬ್ಬಂದಿ ಇದ್ದರು.