ದೇವದುರ್ಗದ ಸಾರ್ವಜನಿಕ ಗ್ರಂಥಾಲಯದಲ್ಲಿ ಕಸಾಪ ನಡೆ ಗ್ರಂಥಾಲಯ ಕಡೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ವಿವಿಧ ಪುಸ್ತಕಗಳನ್ನು ಓದುಗರಿಗೆ ನೀಡಲಾಯಿತು. ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ, ಗ್ರಂಥಾಲಯದ ಅಧಿಕಾರಿ ಹನುಮಂತ್ರಾಯ ನಾಯಕ ಅಂಚೆಸೂಗೂರು, ನವಾಬ್ ಪಾಟೀಲ್, ನಾಗರಾಜ್ ರಾಯಚೂರಕರ್, ನರಸಿಂಗ್ ರಾವ್ ಸರ್ಕೀಲ್, ಶಿವರಾಜ ರುದ್ರಾಕ್ಷಿ, ಡಿ.ಶ್ರೀನಿವಾಸ್ ಇದ್ದರು. 
ಜಿಲ್ಲೆ

ಯುವಜನತೆಗೆ ಸಾಹಿತ್ಯ ಆಸಕ್ತಿ ಅಗತ್ಯ

ಪ್ರವೀಣ ಉದುಸಾ ದಲಬಂಜನ್

ದೇವದುರ್ಗ: ಸಾಮಾಜಿಕ ಜಾಲತಾಣಗಳಿಂದ ಯುವಜನತೆ ದಾರಿ ತಪ್ಪುತ್ತಿದ್ದಾರೆ. ಅವರನ್ನು ಸರಿದಾರಿಗೆ ತರಲು ಸಾಹಿತ್ಯ ಆಸಕ್ತಿ ಬೆಳೆಸುವುದು ತುರ್ತು ಅಗತ್ಯವಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ್ ಹೇಳಿದರು.

ಪಟ್ಟಣದ ಸಾರ್ವಜನಿಕ ಕೇಂದ್ರ ಗ್ರಂಥಾಲಯದಲ್ಲಿ ಕಸಾಪದಿಂದ ಆಯೋಜಿಸಿದ್ದ ಕಸಾಪ ನಡೆ ಗ್ರಂಥಾಲಯ ಕಡೆ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ಯುವಜನತೆ ಕೇವಲ ಮೊಬೈಲ್, ಟಿವಿ, ಸಿನಿಮಾ, ಸಾಮಾಜಿಕ ಜಾಲತಾಣಕ್ಕೆ ಸೀಮಿತವಾಗುವುದು ಭವಿಷ್ಯದ ದೃಷ್ಟಿಯಿಂದ ಸರಿಯಲ್ಲ. ಸಾಹಿತ್ಯ ಆಸಕ್ತಿ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕಸಾಪ ನಡೆ ಗ್ರಂಥಾಲಯ ಕಡೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಯುವಜನತೆಯನ್ನು ಸಾಹಿತ್ಯ ಕಡೆ ಆಕರ್ಷಣೆ ಮಾಡಲು ಸ್ಥಳೀಯ ಸಾಹಿತ್ಯ ಓದಲು ಪ್ರೇರೇಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿರಿ ದುರ್ಗಾ, ದೇವದುರ್ಗ ತಾಲೂಕು ದರ್ಶನ, ದೋ ಅಬ್ ರಾಯಚೂರು ಸೇರಿ ವಿವಿಧ ಪುಸ್ತಕಗಳನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ. ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳು ಪತ್ರಿಕೆ, ಸ್ಪರ್ಧಾತ್ಮಕ ಪುಸ್ತಕದ ಜತೆಗೆ ಸಾಹಿತ್ಯ ಪುಸ್ತಕ ಓದಬೇಕು ಎಂದರು.

ಗ್ರಂಥಾಲಯದ ಅಧಿಕಾರಿ ಹನುಮಂತ್ರಾಯ ನಾಯಕ ಅಂಚೆಸೂಗೂರು, ಪ್ರಮುಖರಾದ ನವಾಬ್ ಪಾಟೀಲ್, ನಾಗರಾಜ್ ರಾಯಚೂರಕರ್, ನರಸಿಂಗ್ ರಾವ್ ಸರ್ಕೀಲ್, ಶಿವರಾಜ ರುದ್ರಾಕ್ಷಿ, ಡಿ.ಶ್ರೀನಿವಾಸ್, ಜಿ.ಸಂತೋಷ್, ರಂಗಪ್ಪ ಬಲಿದವ್ ಕೋತಿಗುಡ್ಡ, ಗುಂಡುರಾವ್ ನಾಯಕ, ಆಕಾಶ್, ಸಂಜಯ, ಶಿವರಾಜ್ ಇತರರಿದ್ದರು.