ಜಿಲ್ಲೆ

ಕಾಂಗ್ರೆಸ್ ನಾಯಕರಿಂದ ಹೊಂದಾಣಿಕೆ ರಾಜಕೀಯ; ಜೆಡಿಎಸ್ ತಾಲೂಕು ಅಧ್ಯಕ್ಷ ಬುಡ್ಡನಗೌಡ ಪಾಟೀಲ್ ಆರೋಪ

Raichur

ದೇವದುರ್ಗ: ತಾಲೂಕಿಗೆ ಕಾಂಗ್ರೆಸ್ ನಾಯಕರ ಕೊಡುಗೆ ಶೂನ್ಯ. ಕಾಂಗ್ರೆಸ್ ನಾಯಕರಿಗೆ ನೈತಿಕತೆ ಇದ್ದರೆ ಬಹಿರಂಗ ಚರ್ಚೆಗೆ ಬರಲಿ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಬುಡ್ಡನಗೌಡ ಪಾಟೀಲ್ ಜಾಗಟಗಲ್ ಸವಾಲು ಹಾಕಿದರು.

ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದರು. ಹೊಂದಾಣಿಕೆ ರಾಜಕೀಯ ತಾಲೂಕು ಕಾಂಗ್ರೆಸ್ ನಾಯಕರ ಹುಟ್ಟುಗುಣವಾಗಿದೆ. ಅವಕಾಶಕ್ಕೆ ತಕ್ಕಂತೆ ರಾಜಕೀಯ ಮಾಡುತ್ತಾರೆ. ಪುರಸಭೆಯಲ್ಲಿ 1ಸ್ಥಾನ ಇರುವ ಜೆಡಿಎಸ್ ಸದಸ್ಯರ ಮನೆಗೆ 12 ಸ್ಥಾನ ಹೊಂದಿರುವ ಕಾಂಗ್ರೆಸ್ ನಾಯಕರು ಬಂದು ಅಧಿಕಾರ ಬಿಟ್ಟುಕೊಟ್ಟಿದ್ದೇ ಕಾಂಗ್ರೆಸ್‌ನವರ ಹೊಂದಾಣಿಕೆ ರಾಜಕೀಯಕ್ಕೆ ಸಾಕ್ಷಿ ಎಂದರು.

ಶೇ.70 ನಾಯಕರು ಕಾಂಗ್ರೆಸ್ ತೊರೆದಿದ್ದಾರೆ. ಉಳಿದ ಶೇ.30 ನಾಯಕರನ್ನು ಉಳಿಸಿಕೊಳ್ಳಲು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಬುಡ್ಡನಗೌಡ ಪಾಟೀಲ್ ದೂರಿದರು.